89
ಶಿರಸಿ : ಸಾರಿಗೆ ಸಂಸ್ಥೆಯ ಬಸ್ಸ್ ಕಂದಕಕ್ಕೆ ಉರುಳುರುಳಿ ಬಿದ್ದ ಘಟನೆ ಶನಿವಾರ ರಾತ್ರಿ ಹೊತ್ತಿಗೆ ವಡ್ಡಿ ಘಾಟ್ ತಿರುವಿನಲ್ಲಿ ಸಂಭವಿಸಿದೆ ಪರಿಣಾಮವಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ನಿರ್ವಾಹಕ ಸೇರಿ 49 ಪ್ರಯಾಣಿಕರು ಗಾಯಗೊಂಡಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಮಟಾ – ಶಿರಸಿ ರಸ್ತೆಯು ಅಗಲೀಕರಣ ಕಾಮಗಾರಿಯಿಂದ ಬಂದ್ ಮಾಡಲಾಗಿದ್ದು ಶಿರಸಿಗೆ ಪ್ರಯಾಣಿಸುವ ಬಸ್ ಮಾರ್ಗವನ್ನು ವಡ್ಡಿ ಘಾಟ್ ರಸ್ತೆ ಮಾರ್ಗವಾಗಿ ಪ್ರಯಾಣಿಸುತ್ತಾರೆ . ರಾಜ್ಯ ಹೆದ್ದಾರಿಯಾದ ಇದು ಘಟ್ಟದ ಪ್ರದೇಶದಲ್ಲಿ ಭಾರಿ ತಿರುವಿದ್ದು, ತಿರುವುಗಳು ಅಪಾಯಕಾರಿಯಾಗಿದೆ. ಘಾಟ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಕಂದಕಕ್ಕೆ ಬಿದ್ದಿದೆ ಎನ್ನಲಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 49 ಮಂದಿ ಪ್ರಯಾಣಿಕರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಮೆಲಕ್ಕೆತ್ತಿ ಖಾಸಗಿ ವಾಹನಗಳ ಮೂಲಕ ಅಂಕೋಲಾ ಮತ್ತು ಕುಮಟಾ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

