ಬಿ.ಆರ್.ಸೇವಾ ಟ್ರಸ್ಟ್ ಅಲ್ತಾರು ಇವರ ಆಶ್ರಯದಲ್ಲಿ ಸೈಬ್ರಕಟ್ಟೆ ಸ್ವಾಗತ್ ಹಾಲ್ ನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಸತೀಶ್ ಸೂರ್ಗೋಳಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ರವಿಕಿರಣ್ ಮುರ್ಡೇಶ್ವರ ಮಾಲಾರ್ಪಣೆ ಮಾಡಿದರು ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಮೊಂಬತ್ತಿ ಬೆಳಗುವುದರ ಮೂಲಕ ಉದಯ್ ಕುಮಾರ್ ತಲ್ಲೂರ್ (ಸಂಸ್ಥಾಪಕ ಅಧ್ಯಕ್ಷರು ಭೀಮಘರ್ಜನೆ) ಇವರು ಉದ್ಘಾಟಿಸಿ ಟ್ರಸ್ಟಿಗೆ ಶುಭ ಹಾರೈಸಿ, ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಇಂತಹ ಒಂದು ಹಳ್ಳಿಯ ಭಾಗದಲ್ಲಿ ಇಷ್ಟೊಂದು ಅದ್ಭುತ ಕಾರ್ಯಕ್ರಮ ನೀಡಿದ ಟ್ರಸ್ಟಿಗೆ ಶುಭ ಹಾರೈಸಿ,ಅಂಬೇಡ್ಕರ್ ನೀಡಿರುವ ಸ್ವಾತಂತ್ರ್ಯ ಸಹೋದರತೆ ಸಮಾನತೆ ಇದನ್ನು ಭೋಧಿಸುವ ಸಂವಿಧಾನವೇ ಶ್ರೇಷ್ಠ ಧರ್ಮ ಎಂದು ಪ್ರತಿಪಾದಿಸಿದರು, ಈ ಟ್ರಸ್ಟ್ ನಿಂದ ಇನ್ನಷ್ಟು ಸಮಾಜಮುಖಿ ಕೆಲಸ ನಡೆಯಲಿ ನಿಮ್ಮ ಪ್ರತಿ ಹಂತದಲ್ಲಿ ಜೊತೆಗಿರುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇದಿಕೆಯಲ್ಲಿ ನ್ಯಾಯಾಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ರವಿಕಿರಣ್ ಮುರ್ಡೇಶ್ವರ, ಪಿ.ಎಚ್. ಡಿ ಪದವೀಧರರಾದ ಡಾ.ನಾಗರತ್ನ ಕುಮಾರಸ್ವಾಮಿ, ಡಾ.ಕಲಾವತಿ ಕಡಂಗೋಡು ಇವರನ್ನ ಸನ್ಮಾನಿಸಲಾಯಿತು, ಸುಮಾರು 15 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಚೆಕ್ ವಿತರಿಸುವ ಮೂಲಕ ಸಹಾಯ ಧನವನ್ನ ನೀಡಲಾಯಿತು, ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಚಂದ್ರ ಅಲ್ತಾರ್ ( ಅಧ್ಯಕ್ಷರು ಬಿ.ಆರ್.ಸೇವಾಟ್ರಸ್ಟ್ ಅಲ್ತಾರು) ಇವರು ವಹಿಸಿದ್ದು,ಮುಖ್ಯ ಅತಿಥಿಗಳಾಗಿ ,ನಿರಂಜನ್ ಹೆಗ್ಡೆ ಅಲ್ತಾರು,ಪ್ರಕಾಶ್ ಶೆಟ್ಟಿ ಹೇರಾಡಿ,ಲಯನ್ ವಿಶ್ವನಾಥ್ ಶೆಟ್ಟಿ, ರಾಘವೇಂದ್ರ ಎಚ್ ನಾಯಕ್,ಶ್ರೀ ರಾಮ್ ದಿವಾಣ,ಮುಂತಾದವರು ಭಾಗವಹಿಸಿದ್ದರು,ಪೂರ್ವಿಕ ಅಲ್ತಾರು ಸ್ವಾಗತಿಸಿದರು, ರಾಘು ಶೀರೂರು ನಿರೂಪಣೆ ಮಾಡಿದರು,ಕಾರ್ಯಕ್ರಮಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ