Home » ಅಡ್ವಾಣಿ ಮುಡಿಗೆ ಭಾರತ ರತ್ನ
 

ಅಡ್ವಾಣಿ ಮುಡಿಗೆ ಭಾರತ ರತ್ನ

by Kundapur Xpress
Spread the love

ನವದೆಹಲಿ: ಹುಟ್ಟಿದ್ದು ಅಖಂಡ ಭಾರತದ ಸಿಂದ್ ಪ್ರಾಂತದ ಕರಾಚಿಯಲ್ಲಿ  ರಾಷ್ಟ್ರ ವಿಭಜನೆಯ ಕರಾಳತೆಯನ್ನು ಹತ್ತಿರದಿಂದ ಕಂಡ ಆಡ್ವಾಣಿಯವರು, ಸಂಘದ ಪ್ರಚಾರಕರಾಗಿ, ಜನಸಂಘ, ಬಿಜೆಪಿ ನಾಯಕರಾಗಿ, ದೇಶದ ಉಪ ಪ್ರಧಾನಿಯಾಗಿ ಹಿರಿಯ ಮುತ್ಸದ್ದಿಯಾಗಿ ಭಾರತೀಯರ ಜನಪ್ರೀತಿಗೆ ಪಾತ್ರರಾದವರು ಎಲ್‌ ಕೆ ಅಡ್ವಾಣಿ ಭಾರತದ ಸ್ವಾತಂತ್ರೋತ್ತರದ ಭಾರತೀಯ ರಾಜಕೀಯಕ್ಕೆ ಹೊಸ ದಿಕ್ಕು ನೀಡಿ ಭಾರತೀಯರ ಪ್ರೀತಿಗೆ ಭಾಜನರಾದ ಲಾಲ್‌ ಕೃಷ್ಣ ಅಡ್ವಾಣಿಯವರಿಗೆ ಭಾರತ ರತ್ನ ಗೌರವ ಸಂದಿರುವುದು ಅತ್ಯಂತ ಅರ್ಥಪೂರ್ಣ

ರಾಮರಥ ಯಾತ್ರೆ ಮೂಲಕ ಬಿಜೆಪಿಯನ್ನು ಕೇವಲ 2 ಸಂಸತ್ ಸ್ಥಾನದಿಂದ ಬಹುಮತದ ಅಂಚಿಗೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ನಾಯಕ ಎಲ್‌ ಕೆ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಸಂದಿದೆ. ಈ ಮೂಲಕ ಭಾರತ ರತ್ನ ಪಡೆಯುತ್ತಿರುವ 50ನೇ ಸಾಧಕರಾಗಿ ಅಡ್ವಾಣಿ ಹೊರ ಹೊಮ್ಮಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಕಟಿಸಿದ್ದಾರೆ ಇದರ ಬೆನ್ನಲ್ಲೇ ಅಡ್ವಾಣಿ ಅವರು ದೇಶದ ಜನತೆಗೆ ಹಾಗೂ ಪ್ರಶಸ್ತಿಯನ್ನು ಘೋಷಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. 96 ಹರೆಯದ ನಾಯಕನಿಗೆ ಇದರ ಬೆನ್ನಲ್ಲೇ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ನಡುವೆಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇರು ನಾಯಕ ಎಲ್. ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ನೀಡಿ ಪುರಸ್ಕರಿಸಲು ಉತ್ಸುಕರಾಗಿದ್ದಾರೆಎಂದು ಹೇಳಿಕೆ ನೀಡಿದ್ದಾರೆ ರಾಮರಥ ಯಾತ್ರೆಯ ಮೂಲಕ ರಾಮಮಂದಿರ ಕಟ್ಟುವ ಸಂಕಲ್ಪ ಮಾಡಿದ್ದ ಹಿರಿಯ ನಾಯಕನಿಗೆ ರಾಮಮಂದಿರ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಭಾರತ ರತ್ನ ಪ್ರಶಸ್ತಿ ಘೋಷಣೆ ವಿಶೇಷವಾಗಿದೆ

   

Related Articles

error: Content is protected !!