ಕೋಟ: ಸಮುದಾಯದ ಮಹಿಳೆಯರು ಸ್ವಾವಲಂಬಿ ಬದುಕಿನತ್ತ ಚಿತ್ತ ಹರಿಸಬೇಕು ಆ ಮೂಲಕ ಮನೆಮನಗಳಲ್ಲಿ ಐಸಿರಿ ತುಂಬುವಂತ್ತಾಗಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷೆ ರೂಪಾ ಶಾಸ್ತ್ರೀ ನುಡಿದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಬಯಲು ರಂಗಮAದಿರದಲ್ಲಿ ಮಹಿಳಾ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸAಸ್ಥೆ ಇವರ ನೇತೃತ್ವದಲ್ಲಿ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಮತ್ತು ಅಂಗಸಂಸ್ಥೆ ಸಹಯೋಗದೊಂದಿಗೆ ಐಸಿರಿ ಮಹಿಳಾ ಸಮ್ಮೇಳನ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ಸಾಂಸ್ಕ್ರತಿಕ,ಸಾಮಾಜಿಕ,ಸಂಘಟಿತ,ರಾಜಕೀಯ, ಸ್ವಾವಲಂಬಿಯಾಗಿ ಮುನ್ನಲ್ಲೆಗೆ ಬರುವ ಮೂಲಕ ಸಮುದಾಯದ ಏಳಿಗೆಯ ಕೇಂದ್ರವಾಗಲಿ, ಹೆಚ್ಚು ಹೆಚ್ಚು ಮಹಿಳಾ ಸಮಾವೇಶಗಳನ್ನು ಆಯೋಜಿಸಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಂಘಟಿತ ಶಕ್ತಿಯಾಗಿ ಹೊರಹೊಮ್ಮಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಶೇಖರ್ ಆಸ್ಪತ್ರೆಯ ಸ್ತಿçà ರೋಗ ತಜ್ಞೆ ಡಾ.ಪುಷ್ಭಲತಾ.ವಿ.ಐತಾಳ್,ಗಮಕ ವಿದುಷಿ ಯಾಮಿನಿ ಭಟ್,ಪಿಎಚ್‌ಡಿ ಯುಎಸ್‌ಎ ಡಾ.ಸಹನಾ ಹೊಳ್ಳ ಇವರುಗಳನ್ನು ಸನ್ಮಾನಿಸಲಾಯಿತು.
ಸಮ್ಮೇಳನಾಧ್ಯಕ್ಷೆಯಾಗಿ ಹಿರಿಯ ಸಂಶೋಧಕಿ ಡಾ.ಗಾಯಿತ್ರಿ ನಾವಡ ,ಶುಭಾಸಂಸನೆಯನ್ನು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ ಎಸ್ ಕಾರಂತ್, ಮುಖ್ಯ ಅಭ್ಯಾಗತರಾಗಿ ತರಂಗ ಪತ್ರಿಕೆಯ ಸಂಪಾದಕಿ ಡಾ.ಯು.ಬಿ ರಾಜಲಕ್ಷಿ÷್ಮÃ,ಗೌರವ ಉಪಸ್ಥಿತಿಯಲ್ಲಿ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಚ್.ಸತೀಶ್ ಹಂದೆ,ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸAಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಡುಪಿ ಜಿಲ್ಲಾ ಸಂಚಾಲಕಿ ಶಾಂತ ಗಣೇಶ್ ಇದ್ದರು.
ಮಹಿಳಾ ವೇದಿಕೆ ಕೂಟಮಹಾಜಗತ್ತು ಸಾಲಿಗ್ರಾಮ ಇದರ ಅಧ್ಯಕ್ಷೆ ಯಶೋಧ.ಸಿ.ಹೊಳ್ಳ ಸ್ವಾಗತಿಸಿದರು.
ಭಾರತಿ ವಿ.ಮಯ್ಯ,ವನೀತಾ ಉಪಾಧ್ಯ ಮತ್ತಿತರರು ಗಣ್ಯರನ್ನು ಪರಿಚಯಿಸಿದರು.ಕಾರ್ಯಕಾರ್ಯಕ್ರಮವನ್ನು ಸುಜಾತ ಬಾಯರಿ,ನಾಗರತ್ನ ಹೇರ್ಳೆ ನಿರೂಪಿಸಿ ವಂದಿಸಿದರು.
ಐಸಿರಿ ವಿಶೇಷತೆ
ಐಸಿರಿ ಸಮಾವೇಶದಲ್ಲಿ ಪೂರ್ವಾಹ್ನ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವರಿಗೆ ಪ್ರಾರ್ಥನೆ ಸಲ್ಲಿಸಿ,ವಿಷ್ಣು ಸಹಸ್ರನಾಮ ಪಠಿಸಿ,ನಂತರ ಮೆರಣಿಗೆಯ ಮೂಲಕ ಆಂಜನೇಯ ದೇಗಯಲವನ್ನು ಸಂದರ್ಶಿಸಲಾಯಿತು.
ನೂರಾರು ಮಹಿಳೆಯರು ಮಂಗಳ ದ್ರವ್ಯ ಹಿಡಿದು ಭಾಗಿಯಾದರು.ಸೆಕ್ಸೋಪೋನ್,ಭರತ ನಾಟ್ಯ,ಕೋಲಾಟ, ತಾಳದೊಂದಿಗೆ ಅತಿಥಿ ಗಣ್ಯರನ್ನು ವಿಶೇಷವಾಗಿ ಸ್ವಾಗತಿಸಿಕೊಂಡರು.
ಕಾರ್ಯಕ್ರಮ ಉದ್ಘಾಟನೆ
ಐಸಿರಿ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಪಂಚ ಐಸಿರಿಗಳಾದ ತೆಂಗಿನ ಹೂ ಬಿಡಿಸುವುದು,ಧಾನ್ಯ ಹಾಕುವುದು,ತುಳಸಿಗೆ ನೀರೆರೆವುದು,ಹಾಲನ್ನು ಹಾಕುವುದು,ವೀಣೆಗೆ ಹೂ ಹಾಕುವುದರ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಲಾಯಿತು.
ಮಹಿಳಾ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಇವರ ನೇತೃತ್ವದಲ್ಲಿ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಮತ್ತು ಅಂಗಸಂಸ್ಥೆ ಸಹಯೋಗದೊಂದಿಗೆ ಐಸಿರಿ ಮಹಿಳಾ ಸಮ್ಮೇಳನ ೨೦೨೪ ಕಾರ್ಯಕ್ರಮವನ್ನು ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷೆ ರೂಪಾ ಶಾಸ್ತಿç ಉದ್ಘಾಟಿಸಿದರು. ಹಿರಿಯ ಸಂಶೋಧಕಿ ಡಾ.ಗಾಯಿತ್ರಿ ನಾವಡ, ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ ಎಸ್ ಕಾರಂತ್, ತರಂಗ ಪತ್ರಿಕೆಯ ಸಂಪಾದಕಿ ಡಾ.ಯು.ಬಿ ರಾಜಲಕ್ಷಿ ಮಹಿಳಾ ವೇದಿಕೆ ಕೂಟಮಹಾಜಗತ್ತು ಸಾಲಿಗ್ರಾಮ ಇದರ ಅಧ್ಯಕ್ಷೆ ಯಶೋಧ.ಸಿ.ಹೊಳ್ಳ ಮತ್ತಿತರರು ಇದ್ದರು.