ಕುಂದಾಪುರ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇಲ್ಲಿನ ವಿಶೇಷ ಚೇತನ ವಿದ್ಯಾರ್ಥಿಗಳ ಕ್ರೀಡೆ, ಸಾಂಸ್ಕøತಿಕ ಸಾರ್ಥಕ ಸಾಧನೆಗಳ ಪುರಸ್ಕಾರ ಕಾರ್ಯಕ್ರಮ ಸಮನ್ವಯ ಸಂಭ್ರಮ ಶ್ರೀ ವಿನಾಯಕ ಸಭಾ ಗೃಹ ಆನೆಗುಡ್ಡೆ ಕುಂಭಾಶಿಯಲ್ಲಿ ಜರಗಿತು.
ಉದ್ಘಾಟನಾ ಸಮಾರಂಭದಅಧ್ಯಕ್ಷತೆಯನ್ನು ಕುಂದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ. ಎಚ್.ಶೋಭಾ ಶೆಟ್ಟಿ ವಹಿಸಿ, ಸಮನ್ವಯ ಶಿಕ್ಷಣ, ಶಿಕ್ಷಣದ ಅವಿಭಾಜ್ಯ ಅಂಗ. ವಿಶೇಷ ಚೇತನ ವಿದ್ಯಾರ್ಥಿಗಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಹಾಗೂ ಪೆÇೀಷಕರಿಗೆ ಉತ್ತೇಜನ ನೀಡಲು ವಿವಿಧ ಚಟುವಟಿಕೆಗಳನ್ನು ಸಂಘ , ಸಂಸ್ಥೆ ದಾನಿಗಳ ಮೂಲಕ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಉದ್ಘಾಟನೆಯನ್ನು ಕೊರ್ಗಿ ವಿಠಲ ಶೆಟ್ಟಿ, ಪಬ್ಲಿಕ್ ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೊರ್ಗಿ ವಿಠಲ ಶೆಟ್ಟಿ ನೇರವೇರಿಸಿ, ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಕಾರ್ಯಕ್ರಮ ಸಮನ್ವಯ ಸಂಭ್ರಮ ಸಮಯೋಜಿತವಾಗಿದೆ ಎಂದು ಹೇಳಿದರು.
ಈ ವೇದಿಕೆಯಲ್ಲಿ ಸ.ಹಿ.ಪ್ರಾ.ಶಾಲೆ ಕೊರವಡಿಯ 6ನೇ ತರಗತಿಯ ವಿಶೇಷ ಚೇತನ ವಿದ್ಯಾರ್ಥಿ ಪ್ರಣಾವ್ ಇವನು ಸೂರ್ಯ ದೇವ ಎಂಬ ಅಂಕಿತ ನಾಮದೊಂದಿಗೆ ರಚಿಸಿದ ನೂರು ವಚನಗಳ ಆಧುನಿಕ ವಚನ ಮಾಲೆ ಎಂಬ ಪುಸ್ತಕವನ್ನು ಡಯಟಿನ ಹಿರಿಯ ಉಪನ್ಯಾಸಕರಾದ ಶ್ರೀ.ಪ್ರಭಾಕರ ಮಿತ್ಯಾಂತ ಇವರು ಬಿಡುಗಡೆ ಮಾಡಿ ಶುಭ ಹಾರೈಸಿದರು. ಸಮಾರಂಭದಲ್ಲಿ ಹೋಟೆಲ್ ಉದ್ಯಮಿ ಆನಂದ ಶೆಟ್ಟಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಅಧ್ಯಕ್ಷರಾದ ಶ್ರೀ ಗಣೇಶ ಕುಮಾರ್ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ.ಅಶೋಕ ನಾಯ್ಕ್ ಹಾಗೂ ಶ್ರೀ ಚಂದ್ರಶೇಖರ ಶೆಟ್ಟಿ ಮಣ ಗೇರಿ ಉಪಸ್ಥಿತರಿದ್ದರು. ವಿಶೇಷ ಚೇತನ ವಿದ್ಯಾರ್ಥಿಗಳಿಗಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಪರಾಹ್ನ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ.ಅಶೋಕ ನಾಯ್ಕ್ ವಹಿಸಿ, ವಿಶೇಷ ಚೇತನ ವಿದ್ಯಾರ್ಥಿಗಳೇ ನಿಜವಾದ ದೇವರು ಈ ಮಕ್ಕಳನ್ನು ದೇವರ ರೂಪದಲ್ಲಿ ನೋಡುತ್ತೇವೆ ಇವರಲ್ಲಿ ಕೌಶಲ್ಯಗಳಿವೆ. ಇವರ ಸೇವೆಯೇ ನಿಜವಾದ ದೇವರ ಸೇವೆಯೆಂದು ಹೇಳಿದರು.
ಕ್ರೀಡಾ ಸ್ವರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಮಕ್ಕಳ ರಕ್ಷಣಾ ಆಯೋಗ ಬೆಂಗಳೂರು ಇದರ ಸದಸ್ಯರಾದ ಡಾ. ತಿಪ್ಪೇ ಸ್ವಾಮಿ, ಮಕ್ಕಳ ರಕ್ಷಣಾ ಘಟಕ ಉಡುಪಿ ಇದರ ಸದಸ್ಯರಾದ ಕುಮಾರ ಜಿ.ನಾಯ್ಕ್ ಬಹುಮಾನ ವಿತರಿಸಿ ಶುಭ ಹಾರೈಸಿದರು. ಇದೇ ಸಮಾರಂಭದಲ್ಲಿ ವಿಶೇಷ ಸಾಧನೆಗೈದಿರುವ ಪ್ರಣಾವ್ ಕೊರವಡಿ, ಕು.ಕೀರ್ತನಾ ಭಂಡಾರಿ ಕೆರಾಡಿ ಇವರನ್ನು ಸನ್ಮಾನಿಸಲಾಯಿತು.2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾದ 7 ಜನ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ವಿಶೇಷ ಚೇತನ ಕ್ರೀಡಾ ಕೂಟದಲ್ಲಿ ಗುಂಡು ಎಸೆತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಾಗ್ಜೋತಿ ವಿಶೇಷ ಶಾಲೆ ಅಂಪಾರು ಮೂಡುಬಗೆ ಇಲ್ಲಿನ ವಿದ್ಯಾರ್ಥಿ ಕು.ಶೃದ್ಧಾ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದ ಸ.ಪ್ರೌಢ.ಶಾಲೆ ಹೆಸ್ಕತ್ತೂರು ಇಲ್ಲಿನ ತನುಶ್ರೀ ಇವರನ್ನು ಗೌರವಿಸಲಾಯಿತು. ರಾಜ್ಯ ಮಟ್ಟದಲ್ಲಿ ಭಾಗವಹಿಸಿದ 7 ಜನ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಮಹಾ ಪೆÇೀಷಕರಾದ ಕೊರ್ಗಿ ಆನಂದ ಶೆಟ್ಟಿ, ಮಹೇಶ್ಚಂದ್ರ ಶೆಟ್ಟಿ, ಚಂದ್ರಶೇಖರ ಶೆಟ್ಟಿಯವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಯಟ್ ನ ಉಪನ್ಯಾಸಕರಾದ ಶ್ರೀ.ಚಂದ್ರ ನಾಯ್ಕ್, ಶ್ರೀ.ಯೋಗನರಸಿಂಹ ಸ್ವಾಮಿ, ಶ್ರೀ.ಕೊರ್ಗಿ ವಿಠಲ ಶೆಟ್ಟಿ, ಶ್ರೀ.ಆನಂದ ಶೆಟ್ಟಿ, ಶ್ರೀ. ರವೀಂದ್ರ ನಾಯ್ಕ್ ಟಿ.ಪಿ.ಓ, ಸಭಾಗೃಹದ ಮಾಲಿಕರಾದ ಶ್ರೀ.ರವಿರಾಜ, ಉಪಾಧ್ಯಾಯ ನಿವೃತ್ತ ಬಿ.ಐ.ಇ.ಆರ್.ಟಿ ಗಂಗೆ ಶ್ಯಾನುಬೋಗ್ ಹಾಗೂ ಚಂದ್ರಶೇಖರ ಶೆಟ್ಟಿ, ತಿಲೋತ್ತಮೆ ಬಾಯಿ, ಮುಖ್ಯಶಿಕ್ಷಕರಾದ ಮಹೇಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಬಿ.ಐ.ಇ.ಆರ್.ಟಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಬಿ.ಐ.ಇ.ಆರ್.ಟಿ ಶಂಕರ ಕುಲಾಲ್ ಪ್ರಸ್ತಾವಿಕ ನುಡಿಗಳನಾಡಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ ಕುಮಾರ ಶೆಟ್ಟಿ ಹಾಗೂ ಶ್ರೀಮತಿ ಸುಕನ್ಯಾ ಕಾರ್ಯಕ್ರಮ ನಿರ್ವಹಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಿಲ್ಟನ್ ರೋಹಿತ್ ಕ್ರಾಸ್ತಾ ವಂದಿಸಿದರು. ಬಿ.ಆರ್.ಸಿಯ ಎಲ್ಲಾ ಸಮೂಹ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.