192
ಕುಂದಾಪುರ : ಆನೆಗುಡ್ಡೆ ಶ್ರೀ ವಿನಾಯಕ ದೇವಳದ ಪೂರ್ವ ಭಾಗದಲ್ಲಿ ಸುಮಾರು 3 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಿವಿದೊದ್ದೇಶ ಪ್ರಸಾದ ತಯಾರಿಕಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನಿನ್ನೆ ನೆರವೇರಿತು
ಬೆಳಿಗ್ಗೆ 8.೦೦ ಗಂಟೆಗೆ ದೇವತಾ ಪ್ರಾರ್ಥನೆಯೊಂದಿಗೆ ಶಿಲಾನ್ಯಾಸದ ವಿಧಿ ವಿಧಾನಗಳನ್ನು ಪರ್ಯಾಯ ಅರ್ಚಕ ಶ್ರೀ ಕೆ ಶ್ರೀಶ ಉಪಾಧ್ಯಾಯ ಹಾಗೂ ಅರ್ಚಕ ವೇದಮೂರ್ತಿ ಕೆ.ಸುಬ್ರಹ್ಮಣ್ಯ ಉಪಾಧ್ಯಾಯರವರ ನೇತೃತ್ವದಲ್ಲಿ ನಡೆಯಿತು
ಈ ಸಂದರ್ಭದಲ್ಲಿ ದೇವಳದ ಮಾಜಿ ಆಡಳಿತ ಧರ್ಮದರ್ಶಿಗಳಾದ ಕೆ ಸೂರ್ಯನಾರಾಯಣ ಉಪಾಧ್ಯಾಯ ಆಡಳಿತ ಧರ್ಮದರ್ಶಿಗಳಾದ ಶ್ರೀ ರಮಣ ಉಪಾಧ್ಯಾಯ ಶ್ರೀ ನಿರಂಜನ ಉಪಾಧ್ಯಾಯ ವಿಠಲ ಉಪಾಧ್ಯಾಯ ಕ್ರೆಡಾಯ್ ಅಧ್ಯಕ್ಷರಾದ ಗೋಪಾಲ್ ಭಟ್ ದೇವಳದ ಇಂಜಿನಿಯರ್ ಶ್ರೀಕಾಂತ ಆಚಾರ್ಯ ಕಟ್ಟಡಡ ಗುತ್ತಿಗೆದಾರರಾದ ಕಾರ್ಕಡ ವಾಸುದೇವ ಸೋಮಯಾಜಿ ಹಾಗೂ ಉಪಾಧ್ಯಾಯ ಕುಟುಂಬದ ಸದಸ್ಯರು ದೇವಳದ ಮೆನೇಜರ್ ನಟೇಶ್ ಕಾರಂತ್ ಮತ್ತು ಸಿಬ್ಬಂದಿ ವರ್ಗ ಹಾಗೂ ಭಕ್ತರು ಉಪಸ್ತಿತರಿದ್ದರು


