Home » ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಚಾಲನೆ
 

ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಚಾಲನೆ

by Kundapur Xpress
Spread the love

ಕುಂದಾಪುರ : ಕುಂಭಾಸಿಯ ಅನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಇದೇ ತಿಂಗಳ 16 ರಂದು ನಡೆಯಲಿರುವ ಬ್ರಹ್ಮರಥೋತ್ಸವ ಹಾಗೂ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗದ ಅಂಗವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ದೀಪ ಜ್ವಲನದ ಮೂಲಕ ಚಾಲನೆ ನೀಡಲಾಯಿತು

ರಥೋತ್ಸವದ ಪ್ರಯುಕ್ತ ಬುಧವಾರ ಪೂರ್ವಾಹ್ನ ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ವಸ್ತಿವಾಚನ, ಗಣಹೋಮ, ಅಥರ್ವಶೀರ್ಷ ಉಪನಿಷತ್ ಹೋ, ಸತ್ಯಗಣಪತಿ ವೃತ, ಮಹಾಪೂಜೆ, ರಾತ್ರಿ ರಂಗಪೂಜಾ, ಡೋಲಾರೋಹಣ, ಪಲ್ಲಕ್ಕಿ ಉತ್ಸವಗಳ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು

ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿಗಳಾದ ಶ್ರೀ ಕೆ ರಮಣ ಉಪಾಧ್ಯಾಯ ವಿಶ್ರಾಂತ ಆಡಳಿತ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹಾಗೂ ದೇವಳದ ಧರ್ಮದರ್ಶಿಗಳಾದ ಕೆ ನಿರಂಜನ್ ಉಪಾಧ್ಯಾಯ ಹಾಗೂ ವಿಠ್ಠಲ ಉಪಾಧ್ಯಾಯ ಮತ್ತು ಅರ್ಚಕರಾದ ಶ್ರೀ ಕೆ ಶ್ರೀಶ ಉಪಾಧ್ಯಾಯ ದೇವಳದ ಮೆನೇಜರ್ ನಟೇಶ್‌ ಕಾರಂತ್‌  ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗ ಉಪಾಧ್ಯಾಯ ಕುಟುಂಬದ ಸದಸ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು

ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಬುಧವಾರ ಸಂಜೆ ಓಂಕಾರ ನಾಟ್ಯ ಬಳಗ ಹಂಗಳೂರು ಇವರಿಂದ ಕೋಲಾಟ ಭಜನಾ ನೃತ್ಯ ಜಾನಪದ ನೃತ್ಯ ಹಾಗೂ ಸರ್ವಪ್ರಿಯ ಮಹಿಳಾ ಯಕ್ಷ ಬಳಗ ಹೆರ್ಗ ಉಡುಪಿ ಇವರಿಂದ ಯಕ್ಷಗಾವ ಪ್ರಸಂಗ “ಕನಕಾಂಗಿ ಕಲ್ಯಾಣ” ಪ್ರದರ್ಶನಗೊಂಡಿತು ಈ ಸಂದರ್ಭದಲ್ಲಿ ದೇವಾಲಯವನ್ನು ವಿದ್ಯುತ್‌ ದೀಪಗಳಿಂದ ಹಾಗೂ ಪುಷ್ಪಾಲಂಕಾರಗಳಿಂದ ಶೃಂಗರಿಸಲಾಗಿತ್ತು

   

Related Articles

error: Content is protected !!