94
ಕೋಟ : ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ 2024-25 ನೇ ಸಾಲಿನಲ್ಲಿ 05 ಲಕ್ಷ ರೂ ವೆಚ್ಚದಲ್ಲಿ 50 ಜನ ಅಶಕ್ತರಿಗೆ ವೈದ್ಯಕೀಯ ನೆರವನ್ನು ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ಪದ್ಮನಾಭ ಉಪಾಧ್ಯಾಯ, ಹಾಗೂ ಪರ್ಯಾಯ ಅರ್ಚಕರಾದ ಕೃಷ್ಣಾನಂದ ಉಪಾಧ್ಯಾಯ ಮತ್ತು ದೇಗುಲದ ಸಿಬ್ಬಂಧಿ ವರ್ಗ ಮತ್ತು ಮೆನೇಜರ್ ನಟೇಶ್ ಕಾರಂತ್ ಉಪಸ್ಥಿತರಿದ್ದರು.

