ಆನೆಗುಂದಿ ಗುರುಸೇವಾ ಪರಿಷತ್ ಕೋಟ ಮಂಡಲ ಪದಪ್ರದಾನ
ಕೋಟ : ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಕೋಟ ಮಂಡಲದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಚೇಂಪಿ ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಸಭಾಭವನದಲ್ಲಿ ಜರಗಿತು.
ಬಾರ್ಕೂರು ಕಾಳಿಕಾಂಬ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗುರುಸೇವೆಯಿಂದ ಜೀವನದಲ್ಲಿ ಪುಣ್ಯ ಪ್ರಾಪ್ತಿಯಾಗುತ್ತದೆ ಹಾಗೂ ಗುರುವನ್ನು ಗೌರವಿಸುವವರು ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ. ಆದ್ದರಿಂದ ಸಮಾಜ ಬಾಂಧವರು ಗುರುಸೇವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಕೋಟ ಮಂಡಲದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಸ್.ಬಿ.ರಾಘವೇಂದ್ರ ಆಚಾರ್ಯ ಸಾಲಿಗ್ರಾಮ ಮಾತನಾಡಿ, ಗುರುಗಳ ಸೇವೆ ಮಾಡುವ ಭಾಗ್ಯ ದೊರೆತಿರುವುದು ನನ್ನ ಸೌಭಾಗ್ಯವಾಗಿದೆ. ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಂಘಟನೆ ಕಟ್ಟಿ ಬೆಳೆಸುವುದಾಗಿತ ತಿಳಿಸಿದರು.
ಸಂಘಟನೆ ನಿಕಟಪೂರ್ವ ಅಧ್ಯಕ್ಷ ಸಾಲಿಗ್ರಾಮ ಸತೀಶ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಂಭಾಶಿ ಆರ್ಯುವೇದ ಆಶ್ರಮದ ಆಚಾರ್ಯ ಶ್ರೀಧರದಾಸ್ ಜೀ ಅವರು ಧಾರ್ಮಿಕ ಪ್ರವಚನ ನೀಡಿದರು.
ಆನೆಗುಂದಿ ಗುರುಸೇವಾ ಪರಿಷತ್ ಅಧ್ಯಕ್ಷ ಕೆಮ್ಮಣ್ಣು ಗಣೇಶ್ ಆಚಾರ್ಯ, ಚೇಂಪಿ ವಿರಾಡ್ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ಸುಬ್ರಾಯ ಆಚಾರ್ಯ ಮಣೂರು, ಗೌರವಾಧ್ಯಕ್ಷ ಚೇಂಪಿ ಜನಾರ್ಧನ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಕೃಷ್ಣ ಆಚಾರ್ಯ ಕೋಟ ಇದ್ದರು.
ಸಂಘಟನೆಯ ಉಪಾಧ್ಯಕ್ಷ ರಮೇಶ್ ಆಚಾರ್ಯ ಚೇಂಪಿ ಸ್ವಾಗತಿಸಿ, ಸಂಚಾಲಕ ಕೋಟ ಗಣೇಶ್ ಆಚಾರ್ಯ ಪ್ರಾಸ್ತಾವಿಕ ಮಾತನಾಡಿ, ಕೃಷ್ಣ ಆಚಾರ್ಯ, ನಾಗರಾಜ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ದಯಾನಂದ ಆಚಾರ್ಯ ವಂದಿಸಿದರು.