ಕುಂದಾಪುರ ತಹಸಿಲ್ದಾರರಿಗೆ ಮನವಿ
ಕುಂದಾಪುರ : ಹಿಂದೂ ನಾಗರಿಕ ವೇದಿಕೆ ಹಾಗೂ ಕುಂದಾಪ್ರ ಫ್ರೆಂಡ್ಸ್ ವತಿಯಿಂದ ಹಿಂದೂ ಮುಖಂಡರಾದ ಸತ್ಯಜಿತ್ ಸುರತ್ಕಲ್ ರವರಿಗೆ ಪುನ: ಗನ್ ಮ್ಯಾನ್ ಭದ್ರತೆಯನ್ನು ನೀಡಬೇಕೆಂದು ಒತ್ತಾಯಿಸಿ ಕುಂದಾಪುರದ ತಹಸಿಲ್ದಾರ್ ಶೋಭಾಲಕ್ಷೀಯವರಿಗೆ ಮನವಿ ಸಲ್ಲಿಸಲಾಯಿತು
ಸತ್ಯಜಿತ್ ಸುರತ್ಕಲ್ ರವರು 25 ವರ್ಷಗಳ ಕಾಲ ಉಡುಪಿ ಹಾಗೂ ದ.ಕ ಜಿಲ್ಲೆಗಳಲ್ಲಿ ಹಿಂದೂ ಸಮಾಜದ ಅನೇಕ ಹೋರಾಟಗಳಲ್ಲಿ ಭಾಗವಹಿಸಿ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದರಿಂದ ಮುಸ್ಲಿಂ ಮೂಲಭತವಾದಿಗಳಿಂದ ಜೀವ ಬೆದರಿಕೆ ಇದ್ದದ್ದರಿಂದ ಅವರಿಗೆ ಕಳೆದ 16 ವರ್ಷಗಳಿಂದ ಗನ್ ಮ್ಯಾನ್ ಭದ್ರತೆಯನ್ನು ನೀಡಲಾಗಿತ್ತು ಇದೀಗ ಸರಕಾರವು ಗನ್ ಮ್ಯಾನ್ ಭದ್ರತೆಯನ್ನು ಹಿಂಪೆಡೆದಿರುವುದು ಸಮಂಜಸವಲ್ಲ ಅವರಿಗೆ ಪ್ರಾಣಾಪಾಯವಿರುವುದರಿಂದ ತಕ್ಷಣವೇ ಅವರಿಗೆ ಭದ್ರತೆಯನ್ನು ನೀಡಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಜಿ ಆರ್ ಪ್ರಕಾಶ್ ನಾಗರಾಜ್ ಅನುಪಮ್ ಭಾಸ್ಕರ ಗಾಣಿಗ ಶ್ರೀನಾಥ್ ಕೋಟೆ ಅರುಣ ಗಂಗೊಳ್ಳಿಯ ಗೋವಿಂದ್ರಾಯ ಶೇರುಗಾರ್ ಗಣೇಶ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು