Home » ರಜೆಗಾಗಿ ಶಾಸಕರಿಂದ ಮನವಿ
 

ರಜೆಗಾಗಿ ಶಾಸಕರಿಂದ ಮನವಿ

by Kundapur Xpress
Spread the love

ಕುಂದಾಪುರ : ಹಿಂದೂಗಳ ಶ್ರದ್ಧಾ ಕೇಂದ್ರವಾದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯಾಗಲಿದ್ದು ಸುಮಾರು 800 ವರ್ಷಗಳ ಕಾಲ ಹಿಂದುಗಳ ಕನಸು ನನಸಾಗುವ ಈ ಭಾವನಾತ್ಮಕ ಹಾಗೂ ಐತಿಹಾಸಿಕ ಕ್ಷಣವನ್ನು ಮನೆ ಮನಗಳಲ್ಲಿ ಆಚರಿಸಲು ಜನವರಿ 22 ರಂದು ಸಾರ್ವತ್ರಿಕ ರಜೆ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಂದಾಪುರದ ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿಯವರು ಮನವಿ ಸಲ್ಲಿಸಿದ್ದಾರೆ

ಪ್ರಧಾನಿ ಮೋದಿ ಕರೆ

ಶ್ರೀರಾಮ ದೇವರ ವಿಗ್ರಹದ ಪ್ರಾಣ ಪ್ರತಿಷ್ಠೆಯು ಜ.22 ರಂದು ನಡೆಯಲಿದ್ದು, ದೇಶದಾದ್ಯಂತ ದೇವಸ್ಥಾನ, ಮಂದಿರ, ಸಂಘ ಸಂಸ್ಥೆಗಳಲ್ಲಿ ವಿಶೇಷ ಪೂಜೆ, ಭಜನೆ, ಸಂಕೀರ್ತನೆ, ಅನ್ನಸಂತರ್ಪಣೆ ಆಯೋಜಿಸಲಾಗುತ್ತಿದೆ. ಪ್ರಧಾನಿ ಮೋದಿ ಈ ಪವಿತ್ರ ದಿನವನ್ನು ದೀಪಾವಳಿ ಹಬ್ಬದಂತೆ ಆಚರಿಸಲು ಜನತೆಗೆ ಕರೆ ನೀಡಿದ್ದಾರೆ

   

Related Articles

error: Content is protected !!