ಬ್ರಹ್ಮಾವರ : ಬ್ರಹ್ಮಾವರ ತಾಲೋಕಿನ ಹೊಸೂರಿನಿಂದ ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಬೇಕಿದ್ದ ಗರ್ಭಿಣಿ ರಾಜೇಶ್ವರಿ ಎಂಬವರು ಅರೋಗ್ಯ ಕವಚ ಅಂಬುಲೆನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ
ಬೆಳಗ್ಗಿನ ಜಾವ 5.28 ನಿಮಿಷಕ್ಕೆ ಕೊಕ್ಕರ್ಣೆಯ ಅಂಬುಲೆನ್ಸ್ ಚಾಲಕರಾದ ಪ್ರಕಾಶ್ ಎಂಬವರಿಗೆ ಕರೆ ಬಂದಿದ್ದು ತಕ್ಷಣ ಅವರು ಹೊಸೂರಿಗೆ ತೆರಳಿ ರಾಜೇಶ್ವರಿಯವರನ್ನು ಉಡುಪಿಗೆ ಕರೆದುಕೊಂಡು ಬರುವಾಗ ಬೆಳಿಗ್ಗೆ 6.36 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದು ಸುಶ್ರೂಷಕರಾದ ಪರಮೇಶ್ವರ ಛಲವಾದಿ ಎಂಬವರು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ
ತಾಯಿ ಮತ್ತು ಮಗುವನ್ನು ಉಡುಪಿ ಸರಕಾರಿ ಅಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರು ಆರೋಗ್ಯದಿಂದ ಇದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ