ಗಂಗಾವತಿ: ಜೈ ಶ್ರೀರಾಮ್ ಎಂದು ಹೇಳಿದ್ದಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿದ್ದು, ಈ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಶ್ರೀರಾಮನಗರದ ಕುಮಾರ (25) ಎಂಬುವವರು ಜೈ ಶ್ರೀರಾಮ್ ಎಂದಿದಕ್ಕೆ ಮುಸ್ಲಿಂ ಸಮುದಾಯದ ಫಿರೋಜ್ ಖಾನ್, ಸುಲ್ತಾನ್, ಶೇಕ್ಷಾವಲಿ ಸೇರಿ 20 ರಿಂದ 25 ಯುವಕರ ಗುಂಪು ಹಲ್ಲೆ ಮಾಡಿದೆ. ಹಿಂದೂ ಯುವಕನಿಗೆ ಜಾತಿ ನಿಂದನೆ ಮಾಡಿರುವುದು ಎಫ್ ಐ ಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 143, 147, 323, 341, 504,506 m 3(1)(5), 3(2) (2) (2) ಎಫ್ ಐಆರ್ ದಾಖಲಾಗಿದೆ.
ದೂರಿನಲ್ಲೇನಿದೆ ?
ಮಂಗಳವಾರ ರಾತ್ರಿ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಮದ್ಯ ಸೇವಿಸಲು ಬಾರ್‌ಗೆ ಹೋಗಿದ್ದೆ ಅಲ್ಲಿಗೆ ನಮ್ಮೂರಿನ ನಿವಾಸಿ ಫಿರೋಜಖಾನ್ ಎನ್ನುವವ ಬಂದಿದ್ದ ಒಂದೇ ಟೇಬಲ್ ನಲ್ಲಿ ಕುಡಿಯುತ್ತಾ ಕೂತಿದ್ದೆವು. ಫಿರೋಜಖಾನ್ ತನ್ನ ಗ್ಲಾಸಿಗೆ ನೀರು ಹಾಕು ಎಂದು ಹೇಳಿದ. ನಾನು ಜೈ ಶ್ರೀರಾಮ ಎಂದು ಹೇಳಿ ಗ್ಲಾಸ್ ಗೆ ನೀರು ಹಾಕಿದೆ. ಏಕೆ ಜೈ ಶ್ರೀರಾಮ ಅಂತ ಹೇಳಿದೆ ಎಂದು ಪಿರೋಜ್ ಖಾನ್ ಕೇಳಿದ. ನಾನು ಇಂದು ಹನುಮ ಜಯಂತಿ ಇದೆ ಅದಕ್ಕೆ ಜೈ ಶ್ರೀರಾಮ ಎಂದು ಹೇಳಿದೆ ಎಂದು ಉಲ್ಲೇಖಿಸಲಾಗಿದೆ. ಈ ವೇಳೆ ನನ್ನ ಮತ್ತು ಫಿರೋಜಖಾನ್ ನಡುವೆ ವಾದ ಪ್ರತಿವಾದವಾಯಿತು. ಬಾರ್‌ನಿಂದ ಹೊರಬಂದ ನಂತರ ಫಿರೋಜ್ ಖಾನ್ ಮತ್ತವನ ತಮ್ಮ ಸುಲ್ತಾನ್ ಹಾಗೂ ಶೇಕ್ಷಾವಲಿ ಸೇರಿ 20ಕ್ಕೂ ಅಧಿಕ ಯುವಕರು ಜಾತಿ ನಿಂದನೆ ಮಾಡಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಕುಮಾರ್ ರಾಠೋಡ್ ಉಲ್ಲೇಖಿಸಿದ್ದಾನೆ.