ಕುಂದಾಪುರ : ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಅಂತರ್ ತರಗತಿ ಐಟಿ ಫೆಸ್ಟ್ “ಟೆಕ್ ಮಂಥನ್ 3.0” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ|ಕೆ. ಉಮೇಶ್ ಶೆಟ್ಟಿಯವರು ವಿದ್ಯಾರ್ಥಿಗಳೇ ತಯಾರಿಸಿದ ಸಾಫ್ಟ್ವೇರ್ ಅಪ್ಲಿಕೇಶನ್ ಮೂಲಕ ಕಾರ್ಯಕ್ರಮವನ್ನು ವಿನೂತನವಾಗಿ ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ NMAMIT ನಿಟ್ಟೆಯ ಪ್ರಾಧ್ಯಾಪಕರಾದ ಡಾl ಸುರೇಂದ್ರ ಶೆಟ್ಟಿ ಇವರು “ಈಗಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ನಮ್ಮೆಲ್ಲಾ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದು, ಕಂಪ್ಯೂಟರಿನ ಮುಂದೆ ಕುಳಿತು ನಾವು ನಮ್ಮ ಬುದ್ಧಿಯನ್ನು ಮರೆತಿದ್ದೇವೆ ಎಂಬ ಅರಿವು ಖಂಡಿತ ನಮಗೆಲ್ಲ ಇರಬೇಕು, ಇಲ್ಲವಾದಲ್ಲಿ ನಾವೇ ತಯಾರಿಸಿದ ಕಂಪ್ಯೂಟರ್ ಗಳು ನಮ್ಮನ್ನು ಆಳುವ ದಿನ ಬರಲು ನಾವು ಹೆಚ್ಚು ಕಾಯಬೇಕಾಗಿಲ್ಲ ” ಎಂದರು.
ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಕಾರ್ಯಕ್ರಮದ ಸಂಯೋಜಕರಾದ ಶ್ರೀ ಹರೀಶ್ ಕಾಂಚನ್ ಮತ್ತು ಶ್ರೀಮತಿ ವಿಲ್ಮಾ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಸುದೀಪ್ , ರಶ್ಮಿತಾ ಉಪಸ್ಥಿತರಿದ್ದರು.
ಅಂತಿಮ ಬಿಸಿಎ ವಿಭಾಗದ ವಿದ್ಯಾರ್ಥಿಗಳೇ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸೀಮಾ ಸ್ವಾಗತಿಸಿದರು, ರಶ್ಮಿತಾ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ದಿವ್ಯಾ ವಂದಿಸಿದರು ಹಾಗೂ ಸಾಂಚಿಯ ತೆರೇಸಾ ಕಾರ್ಯಕ್ರಮ ನಿರೂಪಿಸಿದರು.