ಕುಂದಾಪುರ ನಗರದ ಚಿಕ್ಕಮ್ಮನ ಸಾಲು ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣಾ ಕಾರ್ಯಕ್ರಮವು ಭಾನುವಾರ ಸಂಜೆ ನಡೆಯಿತು
ಕುಂದಾಪುರದ ಹಳೆಬಸ್ ನಿಲ್ದಾಣದದಿಂದ ಹೊರಟ ಮೆರವಣಿಗೆಯು ಮಾಸ್ತಿಕಟ್ಟೆ ಸರ್ಕಲ್ನಲ್ಲಿ ತಿರುಗಿ ನಗರದ ಚಿಕ್ಕಮ್ಮನ ಸಾಲು ರಸ್ತೆಯಲ್ಲಿ ಸಾಗಿ ದೇವಸ್ಥಾನವನ್ನು ತಲುಪಿತು
ರಜತ ಕವಚ ಮೆರವಣಿಗೆಯಲ್ಲಿ ವಿಶೇಷ ಚಂಡೆ ವಾದನ ಹಾಗೂ ಭಜನಾ ಮಂಡಳಿಯವರಿಂದ ಕುಣಿತ ಭಜನೆ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ರಜತಕವಚವನ್ನು ದೇವಸ್ಥಾನಕ್ಕೆ ಸಮರ್ಪಿಸಲಾಯಿತು ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಗಣಪತಿ ಸುವರ್ಣ ಜಲಜ ಸುವರ್ಣ ಹಾಗೂ ಗೌರವ ಸಮಿತಿ ಅಧ್ಯಕ್ಷರು ಉತ್ಸವ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು