Home » ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನ
 

ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನ

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಚಿಕ್ಕಮ್ಮನ ಸಾಲು ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಫೆಬ್ರವರಿ 20ರಿಂದ ಆರಂಭವಾದ ಪುನಃಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣಾ ಕಾರ್ಯಕ್ರಮವು ಮರಕಡದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಗಳ ಆಶೀರ್ವಾದ ಮತ್ತು ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಗಳ ಅನುಗ್ರಹದೊಂದಿಗೆ ವಿದ್ವಾನ್‌  ಕೋಟ ಚಂದ್ರಶೇಖರ ಸೋಮಯಾಜಿ ನೇತೃತ್ವದಲ್ಲಿ ಸಕಲ ವಿಧಿ ವಿಧಾನಗಳೊಂದಿಗೆ ಫೆಬ್ರವರಿ 20ರಿಂದ  23ರ ವರೆಗೆ ವ್ಯವಸ್ಥಿತವಾಗಿ ಹಾಗೂ ವಿಜೃಂಭಣೆಯಿಂದ ನಡೆಯಿತು

ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದ ಬಳಿಕ ತಾಯಿ ಬಗಳಾಂಬ ದೇವಿಯ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವವು ನೆರವೇರಿದ್ದು ವಿದ್ವಾನ್‌ ಕೋಟ ಚಂದ್ರಶೇಖರ ಸೋಮಯಾಜಿಯವರಿಂದ ಧಾರ್ಮಿಕ ವಿಧಿ ವಿಧಾನಗಳು ಸಭಾ ಕಾರ್ಯಕ್ರಮದಲ್ಲಿ ಗಣ್ಯರಿಂದ ಧಾರ್ಮಿಕ ಪ್ರವಚನ ಧರ್ಮದರ್ಶಿಗಳಾದ ಗಣಪತಿ ಸುವರ್ಣ ಮತ್ತು ಶ್ರೀಮತಿ ಜಲಜ ಹಾಗೂ ಮಕ್ಕಳಿಂದ ಮಾರ್ಗದರ್ಶನ ವಿವಿಧ ಸಮಿತಿಗಳ ಸ್ವಯಂಸೇವಕರು ಹಾಗೂ ಸ್ವಯಂಸೇವಕಿಯರಿಂದ ಮತ್ತು ಕಾರ್ಯಕರ್ತರ ಪರಿಶ್ರಮದಿಂದ ಬಗಳಾಂಬ ದೇವಿಯ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ನಿರ್ವಿಘ್ನವಾಗಿ ಸಡಗರ ಸಂಭ್ರಮದಿಂದ ನೆರವೇರಿತು

ಬಗಳಾಂಬ ತಾಯಿ ದೇವಿಯ ಕ್ಷೇತ್ರಕ್ಕೆ ಊರ ಹಾಗೂ ಪರಊರ ಭಕ್ತಾದಿಗಳು ನಿರಂತರ 3-4 ದಿನಗಳಿಂದ ಆಗಮಿಸಿ ದೇವಿಯ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿ ಸೇವೆಗಳನ್ನು ಸಮರ್ಪಿಸಿ ಅನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು

ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ನವಿಯಕ್ಷ ಬಳಗ ಕೋಟದವರಿಂದ ಚಕ್ರ ಚಂಡಿಕೆ ಯಕ್ಷಗಾನ ಮತ್ತು ಜಗದೀಶ ಆಚಾರ್ಯ ಪುತ್ತೂರು ತಂಡದಿಂದ ಸಂಗೀತ ಗಾನ ಸಂಭ್ರಮ ನಡೆಯಿತು ಬ್ರಹ್ಮಕಲಶೋತ್ಸವದ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು

ತಾಯಿ ಬಗಳಾಂಬ ದೇವಿಯ ಸನ್ನಿಧಿಯಲ್ಲಿ ನಡೆದ ಪುನಃಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಲು ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೆ ದೇಗುಲದ ಧರ್ಮದರ್ಶಿಗಳಾದ ಶ್ರೀ ಗಣಪತಿ ಸುವರ್ಣ ಮತ್ತು ಶ್ರೀಮತಿ ಜಲಜ ಸುವರ್ಣರವರು ಧನ್ಯವಾದ ಸಮರ್ಪಿಸಿದ್ದಾರೆ

   

Related Articles

error: Content is protected !!