Home » ಬಳ್ಪ ಸಂಸದರ ಆದರ್ಶ ಗ್ರಾಮದ ಅಭಿವೃದ್ಧಿ ದೇಶಕ್ಕೆ ಮಾದರಿ
 

ಬಳ್ಪ ಸಂಸದರ ಆದರ್ಶ ಗ್ರಾಮದ ಅಭಿವೃದ್ಧಿ ದೇಶಕ್ಕೆ ಮಾದರಿ

-ಭಗವಂತ್ ಖೂಬ

by Kundapur Xpress
Spread the love

ಮಂಗಳೂರು ; ಬಳ್ಪ ಗ್ರಾಮ ಪಂಚಾಯತ್ ನಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ಮೂಲಕ 58 ಕೋಟಿ ರೂ ವೆಚ್ಚದಲ್ಲಿ ಗ್ರಾಮದ ಅಭಿವೃದ್ಧಿ ದೇಶಕ್ಕೆ ಮಾದರಿ ಯಾಗಿದೆ ಎಂದು ಕೇಂದ್ರ ರಾಸಾಯನಿಕ,ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಭಗವಂತ ಖೂಬ ಶ್ಲಾಘಿಸಿದರು. ಅವರು ಇಂದು ಬಳ್ಪ-ಕೇನ್ಯದ ಗ್ರಾಮ ಉತ್ಸವ ಸಮಿತಿ ಆಶ್ರಯ ದಲ್ಲಿ ಹಮ್ಮಿಕೊಂಡಿದ್ದ ಸಂಸದರ ಆದರ್ಶ ಗ್ರಾಮದ ಗ್ರಾಮೋತ್ಸವ -2024 ಕಾರ್ಯ ಕ್ರಮ ವನ್ನು ದ್ದೇಶಿಸಿ ಮಾತನಾ ಡುತ್ತಿದ್ದರು.
ಕುಗ್ರಾಮದಲ್ಲೂ ಕಡುಬಡವರ ಅಭಿವೃದ್ಧಿ ಗಾಗಿ ಸಂಸದರ ಆದರ್ಶ ಗ್ರಾಮದ ಜೊತೆ ಹಲವು ಯೋಜನೆ ಗಳನ್ನು ಕೇಂದ್ರ ಸರಕಾರ ಜಾರಿ ಮಾಡಿದೆ.ವಿಕಸಿತ ಭಾರತ ನಮ್ಮ ಕನಸಲ್ಲ.ಅದು ನನಸಾಗುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಯುತ್ತಿದೆ.ಸಂಸದರ ಆದರ್ಶ ದ ಜೊತೆ, ಎಲ್ಲರಿಗೂ ಆರೋಗ್ಯ, ಎಲ್ಲರಿಗೂ ಶಿಕ್ಷಣ,ಎಲ್ಲರಿಗೂ ಸೂರು ಸೇರಿದಂತೆ ಎಲ್ಲರೂ ನೆಮ್ಮದಿಯಿಂದ ಬದುಕಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದು ಸಚಿವ ಭಗವಂತ ಖೂಬ ಸಂಸದ ನಳಿನ್ ಕುಮಾರ್ ರನ್ನು ಶ್ಲಾಘಿಸಿದರು.

* ಮಂಗಳೂರಿನಲ್ಲಿ 1000 ಕೋಟಿ ರೂಪಾಯಿ ಯ ಪ್ಲಾಸ್ಟಿಕ್ ಪಾರ್ಕ್ ಯೋಜನೆ ಪ್ರಗತಿಯಲ್ಲಿದೆ ಎಂದು ಸಚಿವ ಭಗವಂತ ಖೂಬ ತಿಳಿಸಿದ್ದಾರೆ. *ಆದರ್ಶ ಗ್ರಾಮದ ಯೋಜನೆ ಯಲ್ಲಿ ಶೇ 90ಅಭಿವೃದ್ಧಿ ಕಾಮಗಾರಿ ಪೂರ್ಣ ಗೊಂಡಿದೆ  ಆದರ್ಶ ಗ್ರಾಮದ ಮೂಲಕ ಮೂಲ ಸೌಕರ್ಯ, ಕೆರೆ,ಶಾಲಾ ಕಟ್ಟಡ, ಪಂಚಾಯತ್, ಅಂಗನವಾಡಿ ಕಟ್ಟಡ, ರಸ್ತೆಯ ಅಭಿವೃದ್ಧಿ ಸೇರಿದಂತೆ ಸುಮಾರು 58ಕೋಟಿ ರೂಪಾಯಿಯ ಅನುದಾನ ಬಳ್ಪ -ಕೇನ್ಯ ಗ್ರಾಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರ ದಿಂದ ಸಾಧ್ಯ ವಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಸಮಾರಂಭದಲ್ಲಿವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡುತ್ತಾ, ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮೂಲಕ ಅವರು ಪ್ರತಿನಿಧಿಸುವ ಕ್ಷೇತ್ರದ ಅಭಿವೃದ್ಧಿ ಮಾಡಿರು ವುದು ಇತರರಿಗೆ ಮಾದರಿ ಎಂದರು.
ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಶಾಸಕರಾದ ಭಾಗೀರಥಿ ಮುರುಳ್ಯ,ಪ್ರತಾಪ್ ಸಿಂಹ ನಾಯಕ್,ಮಾಜಿ ಸಚಿವ ಎಸ್. ಅಂಗಾರ ,ಎಂಆರ್ ಪಿಎಲ್ ಮಹಾ ಪ್ರಬಂಧಕ ಕೃಷ್ಣ ರಾಜ್ ಹೆಗ್ಡೆ,ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಕಾರ್ಜೆ, ಉದ್ಯಮಿ ರೋನ್ ರೋಡ್ರಿಗಸ್, ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ವಿನೋದ್ ಬೊಳ್ಮಲೆ,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ಹರೀಶ್ ಕಂಜಿಪಿಲಿ ಮೊದಲಾದವರು ಉಪಸ್ಥಿತರಿದ್ದರು

   

Related Articles

error: Content is protected !!