ಕುಂದಾಪುರ : ಕುಂದಾಪುರ ನಗರದ ಬರೆಕಟ್ಟು ವಾರ್ಡನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಘನ ವಾಹನಗಳ ಸಂಚಾರದಿಂದ ಹೊಂಡ ಹಾಗೂ ಬೃಹದಾಕಾರದ ಗುಂಡಿಗಳು ಬಿದ್ದಿದ್ದು ಕಳೆದ 3-4 ತಿಂಗಳಿನಿಂದ ಬರೆಕಟ್ಟು ನಿವಾಸಿಗಳು ತೀವೃ ಸಂಕಷ್ಟವನ್ನು ಎದುರಿಸುತ್ತಿದ್ದರು
ವಿದ್ಯಾರ್ಥಿಗಳು ಹಿರಿಯ ನಾಗರಿಕರು ಹಾಗೂ ಬೈಕ್ ಸವಾರರು ರಸ್ತೆಯಲ್ಲಿ ಸಂಚರಿಸಲು ತೀವೃ ಪರದಾಡುತ್ತಿದ್ದು ಹಲವು ಬೈಕ್ ಸವಾರರು ಹೊಂಡಕ್ಕೆ ಬೀಳುವ ದೃಶ್ಯ ಸಾಮಾನ್ಯವಾಗಿದೆ ಈ ನಿಟ್ಟಿನಲ್ಲಿ ಬರೆಕಟ್ಟು ರಸ್ತೆಯ ನಿವಾಸಿಗಳು ನಿನ್ನೆ ಮಂಗಳವಾರ ಕುಂದಾಪುರದ ನೂತನ ಅಧ್ಯಕ್ಷರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಬರೆಕಟ್ಟು ರಸ್ತೆಯನ್ನು ಸಂಪೂರ್ಣ ಕಾಂಕ್ರೀಟಿಕರಣ ಮಾಡಬೇಕೆಂದು ಆಗ್ರಹಿಸಿದ್ದಾರೆ
ಮನವಿ ಸ್ವೀಕರಿಸಿದ ಅಧ್ಯಕ್ಷರಾದ ಮೋಹನದಾಸ್ ಶೆಣೈಯವರು ಸಂಜೆಯ ವೇಳೆಗೆ ಪುರಸಭಾ ಮುಖ್ಯಾಧಿಕಾರಿ ಹಾಗೂ ಇಂಜೀನಿಯರ್ ಸೇರಿದಂತೆ ಪುರಸಭಾ ಅಧಿಕಾರಿಗಳೊಂದಿಗೆ ಬರೆಕಟ್ಟು ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಸ್ತೆಯನ್ನು ಶೀಘ್ರದಲ್ಲಿ ಕಾಂಕ್ರೀಟಿಕರಣಗೊಳಿಸುವ ಬಗ್ಗೆ ಭರವಸೆ ನೀಡಿದರು ನೂತನ ಅಧ್ಯಕ್ಷರ ಶೀಘ್ರ ಸ್ಪಂದನೆಗೆ ಬರೆಕಟ್ಟು ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರನ್ನು ಬರೆಕಟ್ಟು ನಿವಾಸಿಗಳ ಪರವಾಗಿ ಅಭಿನಂಧಿಸಿ ಗೌರವಾಸಲಾಯಿತು
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಕೆ ಭಾಸ್ಕರ್ ಗಾಣಿಗ ಪ್ರಕಾಶ್ ಕೆ ರತ್ನಾಕರ ಪೂಜಾರಿ ಅಜಿತ್ ಪೂಜಾರಿ ಸಚಿನ್ ಜಗನ್ನಾಥ ಮಹೇಶ್ ಚಂದ್ರ ವೆಂಕಟೇಶ್ ದಿನೇಶ್ ಪಾಂಡು ನವೀನ್ ಮುಂತಾದವರು ಉಪಸ್ಥಿತರಿದ್ದರು

