ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವ
ಕುಂದಾಪುರ: ಸಮೀಪದ ಬಸ್ರೂರಿನಲ್ಲಿ ಇಂದು ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವದ ದಶಮಾನೋತ್ಸವ ಕಾರ್ಯಕ್ರಮದ ಅದ್ದೂರಿಯಾಗಿ ನಡೆಯಲಿದೆ ಆ ಪ್ರಯುಕ್ತ ಗಂಗೊಳ್ಳಿ ಭಾಗದ ಕಾರ್ಯಕರ್ತರು ಅನೇಕ ದೋಣಿಗಳ ಮೂಲಕ ನದಿ ಮಾರ್ಗವಾಗಿ ಬಸ್ರೂರಿನ ಮಂಡಿಕೇರಿ ಹೊಳೆಬಾಗಿಲಿಗೆ ಅಪರಾಹ್ನ ಗಂಟೆ 3.00 ಕ್ಕೆ ಬರಲಿದ್ದಾರೆ. ಅವರನ್ನು ಸಮಿತಿ ವತಿಯಿಂದ ಸ್ವಾಗತಿಸಿಕೊಂಡು ಶೋಭಾಯಾತ್ರೆಯ ಮೂಲಕ ಶ್ರೀ ದೇವಿ ದೇವಸ್ಥಾನದ ಮೈದಾನಕ್ಕೆ ಬರಲಿದ್ದೇವೆ. ತದನಂತರ 5.00 ಗಂಟೆಗೆ ಸಭಾ ಕಾರ್ಯಕ್ರಮವು ಬಸ್ರೂರಿನ ಶ್ರೀ ದೇವಿ ದೇವಸ್ಥಾನದ ಮೈದಾನದಲ್ಲಿ ನಡೆಯಲಿದ್ದು ಸಭೆಯ ಅಧ್ಯಕ್ಷತೆಯನ್ನು ಹಿರಿಯರಾದ ಶ್ರೀ. ಬಿ. ಅಪ್ಪಣ್ಣ ಹೆಗ್ಡೆ ಆಡಳಿತ ಮೊಕ್ತೇಸರರು ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ಸಂದೀಪ್‍ರಾಜ್ ಮಹದೇವ್‍ರಾವ್ ಮಹಿಂದ್ ಪುಣೆ, ಡಾ.ಎಂ ಕೊಟ್ರೇಶ್ ಪ್ರಾದ್ಯಾಪಕರು ಮತ್ತು ಸದಸ್ಯರು ಭಾರತಿಯ ಇತಿಹಾಸ ಅನುಸಂಧಾನ ಪರಿಷತ್, ದಿಕ್ಸೂಚಿ ಭಾಷಣವನ್ನು ಶ್ರೀ ಶ್ರೀಕಾಂತ್ ಶೆಟ್ಟಿ ಲೇಖಕರು ಮತ್ತು ಪತ್ರಕರ್ತರು ಕಾರ್ಕಳ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬಸ್ರೂರಿನ ಸಜ್ಜನ ಬಂಧುಗಳು ತಾಯಂದಿರು ಊರ ಮತ್ತು ಪರವೂರ ಬಂಧುಗಳು ಉಪಸ್ಥಿತರಿರಬೇಕಾಗಿ ಅಧ್ಯಕ್ಷರಾದ ಉಮೇಶ್ ಆಚಾರ್ ರವರು ವಿನಂತಿಸಿಕೊಂಡಿದ್ದಾರೆ