ರೋಟರಿ ಕ್ಲಬ್ ಸಾಂಸ್ಕೃತಿಕ ಸ್ಪರ್ಧೆ: ಯುವ-ಜನ-ಮನ RYLA 2026ರಲ್ಲಿ ಬಿ.ಬಿ. ಹೆಗ್ಡೆ ಕಾಲೇಜು ಪ್ರಥಮ

by Kundapur Xpress
Spread the love

ಕುಂದಾಪುರ : ಕಾಲೇಜಿನ ರೋಟರಾಕ್ಟ್ ಕ್ಲಬ್ ಹಾಗೂ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳು ರೋಟರಿ ಕ್ಲಬ್, ಕುಂದಾಪುರ ಆಯೋಜಿಸಿದ ರೋಟರಿ ಯುತ್ ಲೀಡರ್‌ಶಿಪ್ ಅವಾರ್ಡ್ RYLA ವಲಯ ತರಬೇತಿ ಕಾರ್ಯಾಗಾರ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದರು.
ತರಬೇತುದಾರರಾದ ಪಿಡಿಜಿ ರೋ. ಅಭಿನಂದನ್ ಎ. ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯದ ಕುರಿತು, ರೋ. ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯದ ಕುರಿತು ಹಾಗೂ ವಕೀಲರಾದ ರೋ. ರಾಘವೇಂದ್ರ ಚರಣ್ ನಾವಡ ಸ್ಮರಣ ಶಕ್ತಿಯ ತಂತ್ರಗಳ ಕುರಿತು ಉಪನ್ಯಾಸ ಮತ್ತು ತರಬೇತಿ ನೀಡಿದರು.
ಇದೇ ಸಂದರ್ಭ ರೋಟರಿ ಕ್ಲಬ್ ಕುಂದಾಪುರ ಕಾಲೇಜು ವಿದ್ಯಾರ್ಥಿಗಳಿಗೆ ‘ಶ್ರೇಷ್ಠ ಭಾರತ – ಸಮೃದ್ಧ ಭಾರತ’ಎಂಬ ವಿಷಯದ ಕುರಿತು ಗಿಳಿಯಾರು ಕುಶಲ್ ಹೆಗ್ಡೆ ರೋಟರಿ ಭವನ, ಕುಂದಾಪುರದಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆಯಿತು.
ಈ ಸಂದರ್ಭ ರೋಟರಿ ಕ್ಲಬ್ ಅಧ್ಯಕ್ಷ ರೋ. ಸತೀಶ್ ಹೆಗ್ಡೆ, ವಲಯ 1ರ ಅಸಿಸ್ಟೆಂಟ್ ಗವರ್ನರ್ ರೊ. ಶ್ರೀನಾಥ್ ಜೆ. ರಾವ್, ಮಾಜಿ ಅಸಿಸ್ಟೆಂಟ್ ಗವರ್ನರ್ ರವಿರಾಜ್ ಶೆಟ್ಟಿ, ಜಿಲ್ಲಾ RYLA ಚೇರ್‌ಮೆನ್ ಜೈ ವಿಠ್ಠಲ್, ಮಾಜಿ ಅಧ್ಯಕ್ಷ ರಾಜಾರಾಮ್ ಶೆಟ್ಟಿ, ಝೋನಲ್ ಲೆಫ್ಟಿನೆಂಟ್‌ಗಳಾದ ಸತ್ಯನಾರಾಯಣ ಪುರಾಣಿಕ್, ಪ್ರಶಾಂತ್ ಹವಾಲ್ದರ್, ಚಂದ್ರಕಲಾ ತಾಂಡೇಲ, ಕುಂದಾಪುರ ರೋಟರಿ ಕ್ಲಬ್‌ನ ಕಾರ್ಯದರ್ಶಿ ಅಶೋಕ್ ವಿ. ಶೆಟ್ಟಿ ಕೊಡ್ಲಾಡಿ ಹಾಗೂ RYLA ವಲಯ ಸಂಯೋಜಕ ರೋ. ವೆಂಕಟೇಶ್ ನಾವುಂದ ಜೊತೆಗೆ ಕಾಲೇಜಿನ ರೋಟರಾಕ್ಟ್ ಕ್ಲಬ್ ಸಂಯೋಜಕ ಶ್ರೀ ಗಿರಿರಾಜ್ ಭಟ್ ಹಾಗೂ ಸಾಂಸ್ಕೃತಿಕ ತಂಡದ ಸಂಯೋಜಕಿ ಶ್ರೀಮತಿ ದೀಪಿಕಾ ಜಿ. ಉಪಸ್ಥಿತರಿದ್ದರು.

 

Related Articles

error: Content is protected !!