Home » ಬಿ.ಬಿ. ಹೆಗ್ಡೆ ಕಾಲೇಜು: ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳ ಕೈಗಾರಿಕಾ ಭೇಟಿ
 

ಬಿ.ಬಿ. ಹೆಗ್ಡೆ ಕಾಲೇಜು: ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳ ಕೈಗಾರಿಕಾ ಭೇಟಿ

by Kundapur Xpress
Spread the love

ಕುಂದಾಪುರ : ಇಲ್ಲಿನ ಪ್ರತಿಷ್ಠಿತ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ದ್ವಿತೀಯ ಮತ್ತು ತೃತೀಯ ವರ್ಷದ ಬಿ.ಕಾಂ. ಸಿ.ಎ., ಸಿ.ಎಸ್. ಹಾಗೂ ಸಿ.ಎಮ್.ಎ ವೃತ್ತಿಪರ ಕೋರ್ಸ್ನ ವಿಭಾಗದ ವಿದ್ಯಾರ್ಥಿಗಳಿಗೆ ಬ್ರಹ್ಮಾವರದ ಹ್ಯಾಂಗ್ಯೋ ಐಸ್‌ಕ್ರೀಮ್ ಪ್ರೆöÊವೇಟ್ ಲಿಮಿಟೆಡ್ ಮತ್ತು ಉದಯವಾಣಿ ದಿನಪತ್ರಿಕೆ ಮಣಿಪಾಲಕ್ಕೆ ಕೈಗಾರಿಕಾ ಭೇಟಿ ಮತ್ತು ಕಲಿಕಾ ಪ್ರವಾಸ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಹ್ಯಾಂಗ್ಯೋ ಐಸ್‌ಕ್ರೀಮ್ ಬ್ರಹ್ಮಾವರದ ಮ್ಯಾನೇಜರ್‌ರಾದ ಶ್ರೀ ಸುರೇಶ್ ಪೈ ವಿದ್ಯಾರ್ಥಿಗಳಿಗೆ ಐಸ್‌ಕ್ರೀಮ್ ತಯಾರಿಕೆ ಮತ್ತು ಅದರ ಸಾಗಾಣಿಕೆ ಕುರಿತು ವಿಸ್ತಾರವಾದ ಮಾಹಿತಿ ನೀಡಿದರು. ಹಾಗೆಯೇ ಮಣಿಪಾಲದ ಉದಯವಾಣಿ ದಿನಪತ್ರಿಕೆ ತಯಾರಿಯ ಪ್ರೆಸ್‌ಗೆ ಭೇಟಿ ನೀಡಿದ್ದು, ರೆಸಿಡೆಂಟ್ ಎಡಿಟರ್ ಶ್ರೀ ಕೃಷ್ಣ ಭಟ್ ಮತ್ತು ಸೀನಿಯರ್ ಪ್ರೊಡಕ್ಷನ್ ಮ್ಯಾನೇಜರ್ ಶ್ರೀ ನಾಗರಾಜ್ ಭಂಡಾರಿಯವರು ದಿನಪತ್ರಿಕೆಗಳ ಮುದ್ರಣ, ದತ್ತಾಂಶಗಳ ವ್ಯವಸ್ಥಿತ ಸಂಗ್ರಹಣೆ ಮತ್ತು ಅವುಗಳ ಸಾಗಾಣಿಕೆಯ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿದರು. ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಸತೀಶ್ ಕಾಂಚನ್, ಶ್ರೀಮತಿ ಶ್ವೇತಾ ಭಂಡಾರಿ ಹಾಗೂ ಕಿಶೋರ್‌ಕೃಷ್ಣ ಮರಕಾಲರವರು ಉಪಸ್ಥಿತರಿದ್ದರು.

 

Related Articles

error: Content is protected !!