ಬೈಂದೂರು : ಕ್ಷೇತ್ರದ ಸಿದ್ಧಾಪುರ ಸೇರಿದಂತೆ ಉಡುಪಿ ಜಿಲ್ಲೆಯ ಇನ್ನುಳಿದ ಕಡೆ ಆಂಬುಲೆನ್ಸ್ ಸೇವೆ ಸ್ಥಗಿತ ಗೊಂಡು ಸಮಸ್ಯೆ ಆಗಿರುವ ಬಗ್ಗೆ ಸದನದಲ್ಲಿ ಪ್ರಸ್ತಾಪ.24/7 ತುರ್ತು ಸೇವೆ ಸಲುವಾಗಿ 108 ಆಂಬುಲೆನ್ಸ್ ಸೇವೆ ಯಾವುದೇ ಅಡೆ ತಡೆ ಇಲ್ಲದೇ ಸಾರ್ವಜನಿಕರಿಗೆ ಸೇವೆ ನೀಡಲು ಸದನದಲ್ಲಿ ಆಗ್ರಹಿಸಿದ ಶಾಸಕರು
ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿ ಹೊಳೆಯವರು ರಾಜ್ಯಾದ್ಯಂತ 108 ಆಂಬುಲೆನ್ಸ್ ದಿನದ 24 ಗಂಟೆಯೂ ಸೇವೆ ನೀಡುವ ಉದ್ದೇಶ ಹೊಂದಿದ್ದರೂ 3 ಪಾಳಿ ಕೆಲಸದ ನಿಯಮ ಜಾರಿಗೊಳಿಸಿದ ನಂತರ ಹಾಗೂ ಅನೇಕ ಸಿಬ್ಬಂದಿಗಳು ರಾಜೀನಾಮೆ ನೀಡಿರುವುದರಿಂದ ಸಿಬ್ಬಂದಿ ಕೊರತೆ ಎದುರಾಗಿ ಸಮರ್ಪಕವಾದ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ರೋಗಿಗಳು ಪರದಾಡುವ ಪರಿಸ್ಥಿತಿ ಉಂಟಾಗಿರುವ ಬಗ್ಗೆ ಗಮನ ಸೆಳೆಯುವ ಸೂಚನೆ ಮೂಲಕ ಎತ್ತಿದ ಪ್ರಶ್ನೆಗೆ ರಾಜ್ಯದ ಆರೋಗ್ಯ ಮಂತ್ರಿಗಳಾದ ಶ್ರೀ ದಿನೇಶ್ ಗುಂಡೂರಾವ್ ರವರು ಈ ವಿಚಾರ ಸರಕಾರದ ಗಮನಕ್ಕೆ ಬಂದಿದೆ ಎಂದಿದ್ದಾರೆ.
24/7 ತುರ್ತು ಆಂಬುಲೆನ್ಸ್ ಸೇವೆಗೆ ಒತ್ತಾಯ :ರಾಜ್ಯದಲ್ಲಿ ಪ್ರಸ್ತುತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಆಂಬುಲೆನ್ಸ್ ಗಳ ಸಂಖ್ಯೆ ಹಾಗೂ ಚಾಲಕರು ಮತ್ತು ಇನ್ನಿತರ ನುರಿತ ಸಿಬ್ಬಂದಿ ಗಳ ಕೊರತೆ ಬಗ್ಗೆ ಕೇಳಿದ ಪೂರಕ ಪ್ರಶ್ನೆ ಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ 108 -ಆರೋಗ್ಯ ಕವಚ ಕಾರ್ಯಕ್ರಮ ದಡಿಯಲ್ಲಿ ಒಟ್ಟಾರೆ 715 ಆಂಬುಲೆನ್ಸ್ ಗಳು ಕಾರ್ಯ ನಿರ್ವಹಿಸುತ್ತಿವೆ. ಮತ್ತು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸರಕಾರ ಮತ್ತು ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸರ್ವಿಸಸ್ ಸಂಸ್ಥೆಯವರೊಂದಿಗೆ ಒಡಂಬಡಿಕೆ ಮಾಡಿ ಕೊಳ್ಳಲಾಗಿದೆ ಅದರಂತೆ ಕ್ರಮ ವಹಿಸಲಾಗಿದೆ.ಮುಂದುವರಿದು ಸದರಿ 108-ಆರೋಗ್ಯ ಕವಚ ಯೋಜನೆಯನ್ನು ಪ್ರಸ್ತುತ ಸೇವೆ ಒದಗಿಸುತ್ತಿರುವ ಸಂಸ್ಥೆಯವರಿಂದ ಹಸ್ತಾಂತರಿಸಿ ಕೊಂಡು ಸರಕಾರದ ವತಿಯಿಂದಲೇ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಹಾಗೂ ಜಿಲ್ಲಾಡಳಿತದ ಮುಖಾಂತರ ಆಂಬುಲೆನ್ಸ್ ನಿರ್ವಹಣೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಅಲ್ಲದೇ 108 ಆರೋಗ್ಯ ಕವಚ ಯೋಜನೆಯಡಿಯ ಆಂಬುಲೆನ್ಸ್ ಗಳು ಲಭ್ಯವಿಲ್ಲದೆ ಇದ್ದ ಸಂದರ್ಭದಲ್ಲಿ ರಾಜ್ಯ ವಲಯದ ಆಂಬುಲೆನ್ಸ್ ಗಳನ್ನು ಬಳಸಿ ಕೊಂಡು ಸೇವೆಯನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಉತ್ತರಿಸಿದ್ದಾರೆ.
ಸಿದ್ಧಾಪುರ ಭಾಗದಲ್ಲಿ ಆಂಬುಲೆನ್ಸ್ ಸೇವೆ ಸ್ಥಗಿತ ಆಗಿದ್ದ ವಿಚಾರ ಪ್ರಸ್ತಾಪ ಹಾಗೂ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿನ ಆಂಬುಲೆನ್ಸ್ ಚಾಲಕರ ಕೊರತೆ ನೀಗಿಸಲು ಆಗ್ರಹ :ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿದ್ರು ಆಂಬುಲೆನ್ಸ್ ಗಳಿಗೆ ಚಾಲಕರಿಲ್ಲದೆ ಆ ಭಾಗದ ಹಲವಾರು ಹಳ್ಳಿಗಳಿಗೆ ತುರ್ತು ಆರೋಗ್ಯ ಸೇವೆಯಲ್ಲಿ ರತಿಯ ಉಂಟಾಗಿರುವುದು ಹಾಗೂ ಈ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಕೇಳಿರುವ ಪ್ರಶ್ನೆಗೆ ಸಚಿವರು ಉತ್ತರಿಸಿ ಈ ವಿಚಾರ ಗಮನಕ್ಕೆ ಬಂದಿದೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂಬುಲೆನ್ಸ್ ಚಾಲಕರ ಕೊರತೆಯನ್ನು ನೀಗಿಸುವ ಸಲುವಾಗಿ ಹೆಚ್ಚುವರಿಯಾಗಿ ವಾಹನ ಚಾಲಕರು ಇರುವಂತಹ ಜಿಲ್ಲೆಗಳಿಂದ ಸಿಬ್ಬಂದಿಗಳನ್ನು ಪರಿಶೀಲಿಸಿ ವಾಹನ ಚಾಲಕರನ್ನು ನಿಲ್ಲಿಸಲು ಸೂಕ್ತ ನಿರ್ದೇಶನವನ್ನು ಸೇವಾದಾರರಿಗೆ ನೀಡಲಾಗಿದೆ ಎಂದಿದ್ದಾರೆ*.
ಅಂಕಿ ಅಂಶಗಳು :
ಆಂಬುಲೆನ್ಸ್ ನಲ್ಲಿರ ಬೇಕಾದ ನುರಿತ ಸಿಬ್ಬಂದಿಗಳು:
ರಾಜ್ಯದಲ್ಲಿ ಪ್ರಸ್ತುತ ಇರುವ ಒಟ್ಟು 715 ಆಂಬುಲೆನ್ಸ್ ಗಳಿಗೆ 1966 ನುರಿತ ಸಿಬ್ಬಂದಿಗಳ ಹುದ್ದೆಯಲ್ಲಿ 1488 ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರೆ, 478 ಹುದ್ದೆ ಖಾಲಿ ಇದೆ.
ಉಡುಪಿ ಜಿಲ್ಲೆಯಲ್ಲಿ – 18 ಆಂಬುಲೆನ್ಸ್ ಗಳಿಗೆ 54 ಹುದ್ದೆ ಮಂಜೂರಾಗಿದ್ದರೂ ಕರ್ತವ್ಯ ನಿರತ ಸಿಬ್ಬಂದಿ ಇರುವುದು ಕೇವಲ 14..!! 40 ಹುದ್ದೆ ಬಾಕಿ ಇದೆ!!
ಆಂಬುಲೆನ್ಸ್ ಚಾಲಕರು :ರಾಜ್ಯದಲ್ಲಿ ಪ್ರಸ್ತುತ ಒಟ್ಟು ಇರುವ 1966 ಆಂಬುಲೆನ್ಸ್ ಚಾಲಕರ ಪೈಕಿ 1808 ಚಾಲಕರು ಕರ್ತವ್ಯದಲ್ಲಿದ್ದರೆ, 158 ಹುದ್ದೆ ಖಾಲಿ ಇದೆ.
ಉಡುಪಿ ಜಿಲ್ಲೆಯಲ್ಲಿ – 54 ಚಾಲಕರ ಪೈಕಿ ಕೇವಲ 29 ಚಾಲಕರು ಕರ್ತವ್ಯದಲ್ಲಿದ್ದರೆ 25 ಚಾಲಕರ ಕೊರತೆ ಇದೆ!!!

