ಕೋಟ : ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬ್ರಹ್ಮವಾರ ತಾಲೂಕಿನ, ಪಾಂಡೇಶ್ವರ ವಲಯದ ಕಾರ್ಕಡ ಕಾರ್ಯಕ್ಷೇತ್ರದ ಒಳಪಟ್ಟ ನ್ಯೂ ಕಾರ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೂಜ್ಯರು ಮತ್ತು ಅಮ್ಮನವರು ಮಂಜೂರು ಮಾಡಿದ 10 ಜೊತೆ ಬೆಂಚ್ ಡೆಸ್ಕ್ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ಜರಗಿತು. ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಾಲೂಕಿನ ಯೋಜನಾಧಿಕಾರಿ ರಮೇಶ್ ,ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶಂಭು ಭಟ್ , ಎಸ್ಐಡಿಐಬಿಐ ಯೋಜನೆ ಅಧಿಕಾರಿ ಪ್ರತಾಪ್, ತಾಲೂಕು ಜನಜಾಗ್ರತೆಯ ವೇದಿಕೆಯ ಮಾಜಿ ಅಧ್ಯಕ್ಷ ಅತ್ಯುತ್ ಪೂಜಾರಿ , ಪಟ್ಟಣ ಪಂಚಾಯತ್ ಸಾಲಿಗ್ರಾಮ ಉಪಾಧ್ಯಕ್ಷೆ ಗಿರಿಜಾ ಶೇಖರ್ ಪೂಜಾರಿ, ಪಟ್ಟಣ ಪಂಚಾಯತ್ ಸಾಲಿಗ್ರಾಮ ಸದಸ್ಯರಾದ ಸಂಜೀವ ದೇವಾಡಿ, ಬ್ರಹ್ಮಾವರ ವಲಯದ ಕಾರ್ಕಡ ಶಾಲೆಯ ಕ್ಲಸ್ಟರ್ ಸವಿತಾ, ವಲಯ ಅಧ್ಯಕ್ಷರಾದ ರಾಧಾ ಪೂಜಾರಿ, ವಲಯದ ಮೇಲ್ವಿಚಾರಕಿ ಜಯಲಕ್ಷ್ಮೀ ಸೇವಾ ಪ್ರತಿನಿಧಿಯವರಾದ ಶಾರದ , ಶಾಲೆಯ ಅಧ್ಯಾಪಕ ಪ್ರಭಾಕರ್ ಕಾಮತ್,ಶಿಕ್ಷಕ ವೃಂದದವರು ಹಾಗೂ ಶಾಲೆಯ ವಿದ್ಯಾರ್ಥಿಗಳು, ಸ್ಥಳೀಯರು ಉಪಸ್ಥಿಧರಿದ್ದರು.