ಉಡುಪಿ : ಕುಮಾರಿ ಮಾನ್ಯ ಎ ಕಾಂಚನ್, ಶ್ರೀ ಅಶೋಕ ಕಾಂಚನ್ ಹಾಗೂ ಶ್ರೀಮತಿ ಮಮತ ಎ ಕಾಂಚನ್ ರವರ ಏಕೈಕ ಪುತ್ರಿ ದಿನಾಂಕ:27.10.2009ರಲ್ಲಿ ಜನಿಸಿ ತನ್ನ 2ನೇ ತರಗತಿಯಲ್ಲಿರುವಾಗಲೇ ಗುರು ವಿದುಷಿ ಶ್ರೀಮತಿ ಭಾಗೀರಥಿ ಎಮ್. ರಾವ್‌ರವರನ್ನು ಗುರುಗಳಾಗಿ ಪಡೆದು ಕರ್ನಾಟಕ ಸರ್ಕಾರ ನಡೆಸುವ ಭರತನಾಟ್ಯ ಕಿರಿಯ ವಿಭಾಗದ ಪರೀಕ್ಷೆಯಲ್ಲಿ ಗರಿಷ್ಠ ಅಂಕವನ್ನು ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಪಾಸಾಗಿದ್ದಾಳೆ ಅಲ್ಲದೇ ಪ್ರಸ್ತುತ ಬ್ರಹ್ಮಾವರ ಲಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ಮಾಧ್ಯಮಿಕ ಹಂತದ ಪರೀಕ್ಷೆಯನ್ನು ಎದುರಿಸಲು ತಯಾರಿ ನಡೆಸಿದ್ದಾಳೆ ಅಲ್ಲದೇ ರಾಜ್ಯಾದ್ಯಂತ ಹಲವಾರು ಕಡೆಗಳಲ್ಲಿ ಏಕ ವ್ಯಕ್ತಿ ಹಾಗೂ ಗುಂಪುಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದ್ದಲ್ಲದೆ ಅಂಬಲಪಾಡಿ ಉಡುಪಿಯಲ್ಲಿ ನಡೆದ ಕಿಶೋರ ನೃತ್ಯ ಪ್ರತಿಭೋತ್ಸವದಲ್ಲಿ ಭಾಗವಹಿಸಿದ್ದಾಳೆ ಹಾಗೂ ಅತೀ ಚಿಕ್ಕ ವಯಸ್ಸಿನಲ್ಲೇ ಎನ್.ಸಿ.ಡಿಎ ಇಂಟರ್‌ನ್ಯಾಶನಲ್ ಡಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಲ್ಲದೇ ಶಾಲೆಯ ಅನೇಕ ಕಾರ್ಯಕ್ರಮಗಳಲ್ಲಿ ನೃತ್ಯ ನಿರ್ದೇಶನವನ್ನು ಮಾಡಿರುತ್ತಾಳೆ.ಇವಳು ನಾಳೆ ರಂಗಪ್ರವೇಶ ಮಾಡಲಿದ್ದಾಳೆ