Home » 200 ಕೋಟಿ ರೂ. ದೇಣಿಗೆ ನೀಡಿ ಸನ್ಯಾಸತ್ವ ಸ್ವೀಕಾರ
 

200 ಕೋಟಿ ರೂ. ದೇಣಿಗೆ ನೀಡಿ ಸನ್ಯಾಸತ್ವ ಸ್ವೀಕಾರ

by Kundapur Xpress
Spread the love

ಹೊಸದಿಲ್ಲಿ: ಗುಜರಾತ್‌ನ ಶ್ರೀಮಂತ ಜೈನ ದಂಪತಿ ಭವೇಶ್ ಭಂಡಾರಿ ಮತ್ತು ಅವರ ಪತ್ನಿ ಸುಮಾರು 200 ಕೋಟಿ ರೂ. ದೇಣಿಗೆ ನೀಡಿ ಸನ್ಯಾಸತ್ವ ಸ್ವೀಕರಿಸಿ ಆಧ್ಯಾತ್ಮಿಕ ಜ್ಞಾನದ ಅನ್ವೇಷಣೆಯಲ್ಲಿ ತೊಡಗಿದ್ದಾರೆ.

ಫೆಬ್ರವರಿಯಲ್ಲಿ ಅವರು ತಮ್ಮ ಎಲ್ಲಾ ಸಂಪತ್ತನ್ನು ತ್ಯಜಿಸಿದ್ದು, ಈ ತಿಂಗಳ ಕೊನೆಯಲ್ಲಿ ನಡೆಯುವ ಔಪಚಾರಿಕವಾಗಿ ಸಮಾರಂಭದಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಲು ಸಿದ್ದರಾಗಿದ್ದಾರೆ. ಭವೇಶ್ ಭಂಡಾರಿ ಅವರ ಮಗ ಮತ್ತು ಮಗಳು ಎರಡು ವರ್ಷಗಳ ಹಿಂದೆ ಸನ್ಯಾಸತ್ವವನ್ನು ಸ್ವೀಕರಿಸಿದ್ದರು. ಹಿಮ್ಮತ್‌ ನಗರದಿಂದ ನಿರ್ಮಾಣ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಭವೇಶ್ ಭಂಡಾರಿ, ಸನ್ಯಾಸತ್ವವನ್ನು ಸ್ವೀಕರಿಸಿದ ತಮ್ಮ ಮಗಳು ಮತ್ತು ಮಗ ಅನುಸರಿಸಿದ ಮಾರ್ಗವನ್ನು ಅನುಸರಿಸರಿವುದಾಗಿ ತಿಳಿಸಿದ್ದಾರೆ. ತಮ್ಮ ಮಕ್ಕಳು ನಮಗೆ ಭೌತಿಕ ಆಸ್ತಿಯಿಂದ ಬೇರ್ಪಟ್ಟು ತಪಸ್ವಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿದ್ದಾರೆ ತಿಳಿಸಿದ್ದಾರೆ. ಎಂದು

ಏಪ್ರಿಲ್ 22 ರಂದು ಅವರ ಬದ್ಧತೆಯ ಸಮಾರಂಭದ ನಂತರ, ದಂಪತಿಗಳು ಎಲ್ಲಾ ಕೌಟುಂಬಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತಾರೆ. ಬಳಿಕ ಎಲ್ಲಾ ಭೌತಿಕ ಆಸ್ತಿಯನ್ನು ತ್ಯಜಿಸಲಿದ್ದಾರೆ. ಸನ್ಯಾಸತ್ವ ಸ್ವೀಕರಿಸಿದ ನಂತರ ಭವೇಶ್ ಕೇವಲ ಭಿಕ್ಷೆಯಿಂದ ಭಾರತದಾದ್ಯಂತ ಬರಿಗಾಲಿನ ಪ್ರಯಾಣವನ್ನು ಕೈಗೊಳ್ಳುತ್ತಾರೆ.

   

Related Articles

error: Content is protected !!