ಬ್ರಹ್ಮಾವರ : ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಲ್ಲಾಡಿ ಗ್ರಾಮ ಪಂಚಾಯಿತಿನ ವ್ಯಾಪ್ತಿಯಲ್ಲಿರುವ 832ನೆಯ ನಮ್ಮೂರು ನಮ್ಮ ಕೆರೆ ಬೋರ್ಡ್ ಗಲ್ಲು ಮದಗ ಕೆರೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬ್ರಹ್ಮಾವರ, ಗ್ರಾಮ ಪಂಚಾಯತ್ ಬಿಲ್ಲಾಡಿ, ವಂಡಾರು ಮದಗ ಕೆರೆ ಅಭಿವೃದ್ಧಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಪುನಶ್ವೇತನಗೊಳಿಸಲಾದ ವಂಡಾರು ಮದಗ ಕೆರೆಯನ್ನು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿಯವರು ಹಸ್ತಾಂತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರತ್ ಶೆಟ್ಟಿ ಅಧ್ಯಕ್ಷರು ಕೆರೆ ಅಭಿವೃದ್ಧಿ ಸಮಿತಿ ವಂಡಾರು ವಹಿಸಿದರು. ಮುಖ್ಯ ಅತಿಥಿಗಳಾಗಿ
ಮಹೇಶ್ ಶೆಟ್ಟಿ ಉದ್ಯಮಿಗಳು, ಪ್ರಕಾಶ್ ಶೆಟ್ಟಿ ಅಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬ್ರಹ್ಮಾವರ, ಶ್ರೀಮತಿ ಸರಸ್ವತಿ ಬಾಯಿ ಅಧ್ಯಕ್ಷರು ಗ್ರಾಮ ಪಂಚಾಯತ್ ಬಿಲ್ಲಾಡಿ, ಡಿ ಗೋಪಿನಾಥ್ ಕಾಮತ್ ಉದ್ಯಮಿ, ಸಂಪತ್ ಶೆಟ್ಟಿ ಉದ್ಯಮಿ, ಪ್ರವೀಣ್ ಶೆಟ್ಟಿ ವಂಡಾರು ನಿಕಟಪೂರ್ವ ಅಧ್ಯಕ್ಷರು ಬಿಲ್ಲಾಡಿ ಗ್ರಾಮ ಪಂಚಾಯತ್,, ಹಾಗೂ ಈ ಸಂದರ್ಭದಲ್ಲಿ ಬಿಲ್ಲಾಡಿ ಗ್ರಾಮ ಪಂಚಾಯಿತಿನ ಸದಸ್ಯರು, ಕೃಷಿ ಮೇಲ್ವಿಚಾರಕರು ವಲಯ ಮೇಲ್ವಿಚಾರಕರು, ವಿಚಾರಕರು ಸೇವಾ ಪ್ರತಿನಿಧಿಗಳು, ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು ವಂಡಾರು ಒಕ್ಕೂಟ,, ಕ್ಷೇತ್ರ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬ್ರಹ್ಮಾವರ ತಾಲೂಕು, ಹಾಗೂ ಊರಿನ ಅನೇಕ ಪ್ರಮುಖರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

