ಕಾರ್ಕಳ :ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಮುಖಂಡರು ಆಗಿದ್ದ ದಿವಂಗತ ಶ್ರೀ ನರಸಿಂಹ ನಾಯಕ ರವರ ಸುಪುತ್ರ ಹೆಬ್ರಿಕನ್ಯಾನ ರೈತ ಸೇವಾ ಗ್ರಾಮೋದ್ಯೋಗ ಉದ್ದಿಮೆಯ ಮಾಲಕರು, ಕನ್ಯಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು, ಹೆಬ್ರಿ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷರಾದ ಶ್ರೀ ಲಕ್ಷ್ಮಿ ನಾರಾಯಣ ನಾಯಕರವರು ತಮ್ಮ ಬೆಂಬಲಿಗರಾದ ಶ್ರೀ ಅರುಣ್ ಶೆಟ್ಟಿ ಕನ್ಯಾನ, ಪ್ರವೀಣ ಪೂಜಾರಿ, ಜಯಾನಂದ ಕುಲಾಲ್, ಕಾರ್ತಿಕ್ ರವರೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ಶ್ರೀ ವಿ ಸುನಿಲ್ ಕುಮಾರ್ ರವರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪ ಸಿಂಹ ನಾಯಕ್, ಕ್ಷೇತ್ರ ಅಧ್ಯಕ್ಷರಾದ ಶ್ರೀ ಮಹಾವೀರ ಹೆಗಡೆ, ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ನಾಯಕ್, ಬಿಜೆಪಿಯ ಪ್ರಮುಖರಾದ ಶ್ರೀ ರವೀಂದ್ರ ಮಡಿವಾಳ, ಮುನಿಯಾಲು ದಿನೇಶ್ ಪೈ, ಶ್ರೀ ಗುರುದಾಸ ಶೆಣೈ, ಶ್ರೀಮತಿ ಜ್ಯೋತಿ ಹರೀಶ್, ಶ್ರೀ ಗಣೇಶ್ ಕುಮಾರ್ ಶ್ರೀ ಸುಧಾಕರ್ ಹೆಗಡೆ, ಶ್ರೀ ರಮೇಶ ಕುಮಾರ್, ಶ್ರೀ ಸುಧಾಕರ್ ಎಚ್, ಶ್ರೀ ಶೋಧನ ಹೆಗಡೆ, ಶ್ರೀ ಪ್ರಸನ್ನ ಶೆಟ್ಟಿ, ಶ್ರೀ ಸೀತಾರಾಮ ಗಾಣಿಗ, ಶ್ರೀ ಶೇಖರ, ಶ್ರೀ ತಾರಾನಾಥ ಬಂಗೇರ ,ಶ್ರೀ ಜಯ ಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು