ಅಭಿವೃದ್ಧಿಗಳು ಚುನಾವಣೆಯನ್ನು ಗೆಲ್ಲಲಾರವು! ಕೇವಲ ಬಿಟ್ಟಿ ಭಾಗ್ಯಗಳು, ಜಾತಿ, ಧರ್ಮಗಳು, ಗಿಫ್ಟ್ ಗಳು ಮಾತ್ರ ಚುನಾವಣೆಯನ್ನು ಗೆಲ್ಲಬಲ್ಲವು ಎನ್ನುವುದಕ್ಕೆ ಸಣ್ಣದೊಂದು ನಿದರ್ಶನ……
ಅತೀ ಸುಂದರವಾದ ವಿಮಾನ ನಿಲ್ದಾಣವನ್ನು ನಿರ್ಮಿಸಿಕೊಟ್ಟ ಶಿವಮೊಗ್ಗ ರೂರಲ್ ನಲ್ಲಿ ಬಿಜೆಪಿ ಸೋತಿತು! ಹಿಂದೂಗಳು ಬಿಜೆಪಿಯ ವಿರುದ್ಧ ಮತ ಹಾಕಿದರು!
ಹೊಸದಾಗಿ ಮೆಡಿಕಲ್ ಕಾಲೇಜುಗಳನ್ನು ಪಡೆದುಕೊಂಡ ಯಾದಗಿರಿ, ಹಾವೇರಿ, ಚಿಕ್ಕಮಗಳೂರು ಕ್ಷೇತ್ರಗಳು ಬಿಜೆಪಿಯನ್ನು ಸೋಲಿಸಿತು!
ಹೊಸ ವಿಮಾನ ನಿಲ್ದಾಣಕ್ಕೆ ಅನುಮತಿ ಪಡೆದ ಹಾಸನ ಬಿಜೆಪಿಯನ್ನು ಸೋಲಿಸಿತು!
ಅದ್ದೂರಿಯಾಗಿ ನವೀಕೃತಗೊಂಡ ರೈಲ್ವೆ ನಿಲ್ದಾಣಗಳನ್ನು ಪಡೆದುಕೊಂಡ ದಾವಣಗೆರೆ ಮತ್ತು ಹೊಸಪೇಟೆಯ ಜನರು ಬಿಜೆಪಿಯನ್ನು ಸೋಲಿಸಿದರು!
ಗುಬ್ಬಿಯಲ್ಲಿ HAL ನ ಹೆಲಿಕಾಪ್ಟರ್ ಕಾರ್ಖಾನೆ ನಿರ್ಮಿಸಿಕೊಟ್ಟ ಮೋದಿಜಿಯನ್ನು ಬಿಜೆಪಿಯನ್ನು ಗುಬ್ಬಿ ಕ್ಷೇತ್ರದ ಜನರು ಸೋಲಿಸಿದರು!
ಅತ್ಯುತ್ತಮ ನೀರಾವರಿ ಯೋಜನೆಯನ್ನು ಮಾಡಿಸಿಕೊಟ್ಟ ಸೋಮಣ್ಣನವರನ್ನು ಮತ್ತು ಬಿಜೆಪಿಯನ್ನು ಇಡೀ ಚಾಮರಾಜನಗರವೇ ಬಿಜೆಪಿಯನ್ನು ನಿರ್ಲಕ್ಷಿಸಿತು!
ಮಂಡ್ಯದಲ್ಲಿ ದಶಕಗಳಿಂದ ನಿಂತುಹೋಗಿದ್ದ ಸಕ್ಕರೆ ಕಾರ್ಖಾನೆಯನ್ನು ನವೀಕರಿಸಿ ಮರುಸ್ಥಾಪಿಸಿ ಕೊಟ್ಟರು ನಮ್ಮ ಬೊಮ್ಮಾಯಿಯವರು… ಬಿಜೆಪಿ ಇಲ್ಲಿ 3ನೇ ಸ್ಥಾನಕ್ಕೆ ಇಳಿಯಿತು!