ಮಂಗಳೂರು : ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಪಟ್ಟವನ್ನು ಅಲಂಕರಿಸಿರುವ ಬಿಜೆಪಿಯ ಲವಲವಿಕೆಯ ಯುವ ನಾಯಕ ಹಾಗೂ ಚುರುಕಿನ ವ್ಯಕ್ತಿತ್ವದ ಬಿ ವೈ ವಿಜಯೇಂದ್ರ ಇವರು ರಾಜ್ಯಾಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಕಾರ್ಯಕರ್ತರ ಹುರುಪನ್ನ ಹೆಚ್ಚಿಸಿದ್ದಾರೆ
ಬುಧವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿದ ಅವರು ವಿವಿಧ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು ನಗರದ ಸಿ ವಿ ನಾಯಕ್ ಸಭಾಂಗಣದಲ್ಲಿ ಕಾರ್ಯಕರ್ತವನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು ತಮ್ಮ ಮಾತಿನ ಮೋಡಿಯ ಮೂಲಕ ಕಾರ್ಯಕರ್ತರ ಜೋಶ್ನ್ನು ಹೆಚ್ಚಿಸಿದರು ಅಲ್ಲದೆ ಪಕ್ಷದ ಹಿರಿಯ ನಾಯಕರ ಮನೆಗೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದ ವಿಜಯೇಂದ್ರ ಅವರು ಸಂಘನಿಕೇತನಕ್ಕೂ ಭೇಟಿ ನೀಡಿದರು