Home » ಮತದಾರರ ಪಟ್ಟಿ ವಿಶೇಷ ಪರಿಷ್ಕರಣಿಯ ಕಾರ್ಯಗಾರ
 

ಮತದಾರರ ಪಟ್ಟಿ ವಿಶೇಷ ಪರಿಷ್ಕರಣಿಯ ಕಾರ್ಯಗಾರ

ಉದ್ಘಾಟಿಸಿದ ಶಾಸಕ ಎ ಕಿರಣ್ ಕೊಡ್ಗಿ

by Kundapur Xpress
Spread the love

ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ವಿಶೇಷ ಮತದಾರ ಸಮಗ್ರ ಪಟ್ಟಿ ಪರಿಷ್ಕರಣೆಯ ಕಾರ್ಯಗಾರ ವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ  ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ ದೇಶಾದ್ಯಂತ ಸ್ವಚ್ಛ ಮತ್ತು ನವಿಕೃತ ಮತದಾರರ ಪಟ್ಟಿಯನ್ನು ಖಚಿತಪಡಿಸುತ್ತಿದ್ದು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೂಡ ಪಕ್ಷದಿಂದ ಬಿಲ್ಎ -2 ನೇಮಕ ಮಾಡಿ ನಿಯಮಿತವಾಗಿ ಪರಿಷ್ಕರಣಿಯಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಗಾರದ ಬಗ್ಗೆ ಸಮಗ್ರ ಮಾಹಿತಿಯನ್ನು ವಿಧಾನ ಪರಿಷತ್ ಸದಸ್ಯರಾದ *ಪ್ರತಾಪ್ ಸಿಂಹ ನಾಯಕ್* ಮಾತನಾಡಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026 (SIR) ಭಾರತೀಯ ಚುನಾವಣಾ ಆಯೋಗದ (ECI) ಪ್ರಮುಖ ಉಪಕ್ರಮವಾಗಿದೆ ಎಂದು ಮಾತನಾಡಿ ಈ ಪ್ರಕ್ರಿಯೆಯು ನಕಲಿ ಮತದಾರರನ್ನು ತೆಗೆದುಹಾಕಲು ಮತ್ತು ಹೊಸ ಮತದಾರರನ್ನು ಸೇರಿಸಲು ಅವಕಾಶವನ್ನು ಕಲ್ಪಿಸಿದ್ದು ಭರದಿಂದ ಮತದಾರ ಪರಿಷ್ಕರಣಿಯ. ಕಾರ್ಯಾಚರಣೆ ಕುಂದಾಪುರದಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ವಹಿಸಿದರು.
ಕಾರ್ಯಗಾರದ ಬಗ್ಗೆ ಕುಂದಾಪುರ ವಿಶೇಷ ಮತದಾರ ಪರಿಷ್ಕರಣಿಯ ಸಂಚಾಲಕ ರಾಜೇಶ್ ಶೆಟ್ಟಿ ಶಿರೂರು ಮುರ್ಕೈ ಪ್ರಸ್ತಾವಿಕ ಮಾತುಗಳನ್ನಾಡಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ *ಕುತ್ಯಾರು ನವೀನ್ ಶೆಟ್ಟಿ*,, ಪ್ರಧಾನ ಕಾರ್ಯದರ್ಶಿ *ಶ್ರೀಕಾಂತ ನಾಯಕ್* ಉಪಸ್ಥಿತರಿದ್ದು.
ಕೊಲ್ಲಾಪುರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿಕಾರ್ಯಕ್ರಮವನ್ನ ವಿಶೇಷವಾಗಿ ಕುಂದಾಪ್ರ ಕನ್ನಡದಲ್ಲಿ ನಿರೂಪಿಸಿದರು.


ಸುಧೀರ್ ಕೆ ಎಸ್ ವಂದನಾರ್ಪಣೆ ಗೈದರು. ಶ್ರೀಮತಿ ರೂಪಾ ಬಾಬು ಪೈ ಒಂದೇ ಮಾತರಂ ಗೀತೆ ಹಾಡಿದರು.
ಸದ್ರಿ ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇನ್ನೂರ ಇಪ್ಪತ್ತೆರಡು (222) ಬೂತ್ ಏಜೆಂಟ್, ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಹಾಗೂ ಜಿಲ್ಲಾ ಹಾಗೂ ಕ್ಷೇತ್ರ ವ್ಯಾಪ್ತಿಯ ಪಕ್ಷದ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

 

Related Articles

error: Content is protected !!