ಕುಂದಾಪುರ : ಫ್ರೆಂಡ್ಸ್ ಸರ್ಕಲ್ (ರಿ)ಮೀನು ಮಾರ್ಕೆಟ್ ರಸ್ತೆ ಕುಂದಾಪುರ,ಭಾರತ ಸಾಧನಾ ಸಂಘ ಸಿರಿ ಹಾಗೂ ಕರ್ನಾಟಕ ಸಂಘ ರತ್ನ ಗೌರವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯ 35 ನೇ ವಾರ್ಷಿಕೋತ್ಸವದ ಸಮಾರಂಭವು ಮೀನು ಮಾರ್ಕೆಟ್ ರಸ್ತೆಯ ಶ್ರೀ ನಾಗ ಬೊಬ್ಬರ್ಯ ದೇವಸ್ಥಾನ ಬಳಿಯ ಬಯಲು ರಂಗ ಮಂಟಪದಲ್ಲಿ ಜರುಗಲಿದ್ದು, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ದಿನೇಶ್ ಹೆಗ್ಡೆ ಮೊಳಹಳ್ಳಿ. ಉಪಾಧ್ಯಕ್ಷರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ, ಉಡುಪಿ ನೆರವೇರಿಸಲಿದ್ದು, ಸಭಾ ಅಧ್ಯಕ್ಷತೆಯನ್ನು ಶ್ರೀ ಎ.ಕಿರಣ್ ಕುಮಾರ್ ಕೊಡ್ಗಿ. ಮಾನ್ಯ ಶಾಸಕರು ಕುಂದಾಪುರ ವಿಧಾನಸಭಾ ಕ್ಷೇತ್ರ, ಕುಂದಾಪುರ ವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಶುಭಾಶಂಸನೆಯನ್ನು ಶ್ರೀ ಡಾ. ನಾಗೇಶ್ ವೈದ್ಯಕೀಯ ತಜ್ಞರು ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಮಾಡಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಶ್ರೀ ರಾಜೇಶ್ ಕಾರಂತ್ ಸದಸ್ಯರು, ವ್ಯವಸ್ಥಾಪನಾ ಸಮಿತಿ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು.
ಶ್ರೀ ದಿನಕರ್ ಶೆಟ್ಟಿ ಜನನಿ ಕೇಕ್ ಪ್ಯಾಲೇಸ್ ಕುಂದಾಪುರ ಶ್ರೀ ಅಕ್ಷಯ ಶೇಟ್ ಉದಯ ಜ್ಯುವೆಲ್ಲರ್ಸ್ ಕುಂದಾಪುರ ಭಾಗವಹಿಸಲಿದ್ದಾರೆ , ಸನ್ಮಾನ ಕಾರ್ಯಕ್ರಮವು ಶ್ರೀ ಕೋಡಿ ಗಂಗಾಧರ್ ಪೂಜಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು (ಕೃಷಿ ಕ್ಷೇತ್ರ) ಇವರನ್ನು ಗೌರವಿಸಲಾಗುವುದೆಂದು ,ಮನೋರಂಜನಾ ಕಾರ್ಯಕ್ರಮವಾಗಿ ಸಂಸ್ಥೆಯ ಸದಸ್ಯರಿಂದ ಗಾನ ಲಹರಿ ಹಳೆಯ ಆಯ್ದ ಸುಮಧುರ ಕರೋಕೆ ಚಲನಚಿತ್ರ ಗೀತೆ ಮತ್ತು ಮಕ್ಕಳಿಂದ ನೃತ್ಯ ಕಾರ್ಯಕ್ರಮ ಹಾಗೂ ಓಂಕಾರ್ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ನಗೆ ನಾಟಕ : ಕಥೆ ಈಗ ಶುರು… ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

