103
ಕುಂದಾಪುರ: ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಹಂಗಳೂರು ಗ್ರಾಮ ಪಂಚಾಯತ್ ನ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ನಾಗರಾಜ್ ಆಚಾರ್ಯ ಹಂಗಳೂರು ಇವರನ್ನು ಕ್ಷೇತ್ರದ ಶಾಸಕರು ಕುಂದಾಪುರ ಮಂಡಲ ಬಿಜೆಪಿ ಕ್ಷೇತ್ರಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ಅವರು ಪಕ್ಷದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ,ಸುಧೀರ್.ಕೆ.ಎಸ್. ಮಂಡಲ ಉಪಾಧ್ಯಕ್ಷರಾದ ಸುನೀಲ್ ಶೆಟ್ಟಿ ಹೇರಿಕುದ್ರು ,ಪ್ರಕಾಶ್ ಪೂಜಾರಿ ಬೀಜಾಡಿ, ಕುಂದಾಪುರ ಪುರಸಭಾ ಅಧ್ಯಕ್ಷ ಮೋಹನ್ ದಾಸ್ ಶೆಣೈ ಪಕ್ಷದ ಪ್ರಮುಖರಾದ ಕೆದೂರು ಸಂಪತ್ ಕುಮಾರ್ ಶೆಟ್ಟಿ,ರಾಜೇಶ್ ಉಡುಪ, ಕೃಷ್ಣ ಗೊಲ್ಲ ರಾಜೇಶ್ ಶೆಟ್ಟಿ,ಮಂಜುನಾಥ ಬಳ್ಕೂರ, ಅಶೋಕ್ ಪೂಜಾರಿ ಸಾಲಿಗ್ರಾಮ,ಲೋಕೇಶ್ ಅಂಕದಕಟ್ಟೆ ಸಂದೀಪ್ ಖಾರ್ವಿ, ಮಂಜುನಾಥ್ ಕಾಮತ್ ಕುಂಭಾಶಿ,ಪ್ರಶಾಂತ್ ಕುಂದಾಪುರ, ಇನ್ನಿತರರು ಉಪಸ್ಥಿತರಿದ್ದರು.

