ಕುಂದಾಪುರ: ಕುಂದಾಪುರ ತಾಲೂಕಿನ ಅಲ್ಬಾಡಿ ಆರ್ಡಿ ವ್ಯಾಪ್ತಿಯಲ್ಲಿ ಅಭಿಮಾನಿ ಸ್ಪೋರ್ಟ್ಸ್ ಕ್ಲಬ್ ಅರ್ಡಿ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.), ಉಡುಪಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ, ಚಿತ್ತೇರಿ ಅರ್ಡಿ, ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ (ರಿ.) ಕೊಂಜಾಡಿ,ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಆರ್ಡಿ ಇವರ ಸಹಯೋಗದಲ್ಲಿ ಹಾಗೂ ದಿ|| ಕುಷ್ಟಪ್ಪ ಶೆಟ್ಟಿ ಆರ್ಡಿ ಬೈಲುಮನೆ ಇವರ ಸ್ಮರಣಾರ್ಥವಾಗಿ ರಕ್ತದಾನ ಶಿಬಿರ ನೆರವೇರಿತು ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ, ಅಲ್ದಾಡಿ-ಆರ್ಡಿ ಆಯೋಜಿಸಲಾಗಿರುವ ರಕ್ತದಾನ ಶಿಬಿರದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ರಕ್ತದಾನದ ಮೂಲಕ ಇತರರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ಯುವ ಜನರು ಸಾಮಾಜಿಕ ಬದ್ಧತೆ ಬೆಳೆಸಿ ಕೊಳ್ಳುವುದರೊಂದಿಗೆ ರೋಗಿಯ ಜೀವ ಉಳಿಸಲು ನೆರವಾಗುವ ರಕ್ತವನ್ನು ದಾನ ಮಾಡುವುದು ಮಾನವೀಯ ಕಾರ್ಯ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುದರ್ಶನ ಶೆಟ್ಟಿ, ಅಧ್ಯಕ್ಷರು ಅಭಿಮಾನಿ ಸ್ಪೋರ್ಟ್ಸ್ ಕ್ಲಬ್ ಆರ್ಡಿ ವಹಿಸಿದರು. ಗಣೇಶ್ ಆಚಾರ್ಯ ವಹಿಸಿದ್ದರು ಈ ವೇಳೆ ವೇದಿಕೆಯಲ್ಲಿ ಶ್ರೀಮತಿ ರಾಧಾ, ಅಧ್ಯಕ್ಷರು ಗ್ರಾಮ ಪಂಚಾಯತ್ ಬೆಳ್ಳೆ,,ಸತೀಶ್ ಸಾಲ್ಯಾನ್ ಮಣಿಪಾಲ ಅಧ್ಯಕ್ಷರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ,ಜಯಕರ ಶೆಟ್ಟಿ ಸಭಾಪತಿಗಳು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ,,ವಸಂತ ಶೆಟ್ಟಿ ಆರ್ಡಿ ಬೈಲುಮನೆ, ಬಿ. ಸಂತೋಷ ಕುಮಾರ್ ಶೆಟ್ಟಿ ಗೌರವಾಧ್ಯಕ್ಷರು ಅಭಿಮಾನಿ ಸ್ಪೋರ್ಟ್ಸ್ ಕ್ಲಬ್ (ರಿ.) ಆರ್ಡಿ ಶ್ರೀಮತಿ ಲೀಲಾವತಿ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧ. ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು,,ಸಂತೋಷ ಶೆಟ್ಟಿ ಅಧ್ಯಕ್ಷರು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ (ರಿ) ಕೊಂಚಾಡಿ,, ಸುರೇಶ ಶೆಟ್ಟಿ ಅಧ್ಯಕ್ಷರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚಿತ್ತೇರಿ ಆರ್ಡಿ, ಪ್ರಕಾಶ್ ಭಟ್ ಪ್ರಭಾರ ಮುಖ್ಯ ಶಿಕ್ಷಕರು ಚಾ.ನಾ.ಸ್ಮಾರಕ ಪ್ರೌಢಶಾಲೆ ಅಲ್ಟಾಡಿ ಆರ್ಡಿ,ಉದಯ ಕುಮಾರ್ ಶೆಟ್ಟಿ ಶೇಡಿಮನೆ ಅಧ್ಯಕ್ಷರು ಗ್ರಾ. ಪಂ. ಮಡಾಮಕ್ಕಿ,ಜಯರಾಮ್ ಶೆಟ್ಟಿ ಸೂರ್ಗೋಳಿ ಅಧ್ಯಕ್ಷರು ವ್ಯ. ಸೆ. ಸ. ಸಂಘ (ನಿ.) ಬೆಳ್ವೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಸೌರಭ, ಸ್ವಾಗತಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಗಣೇಶ್ ಅರಸಮ್ಮಕಾನು ನಿರ್ವಹಿಸಿದರು, ಶ್ರೀಕಾಂತ್ ಮಾಸ್ಟರ್ ವಂದನಾರ್ಪಣಗೈದರು,