ಹಿರಿಯಡಕ : ಹಿಂದೂ ಯುವಸೇನೆ ಹಿರಿಯಡಕ ಶಾಖೆ ವತಿಯಿಂದ ರಕ್ತನಿಧಿ ವಿಭಾಗ, ಜಿಲ್ಲಾಸ್ಪತ್ರೆ ಉಡುಪಿ ಸಹಯೋಗದಲ್ಲಿ “ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ” ಹಿರಿಯಡಕ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಆಯೋಜಿಸಲಾದ “ಬೃಹತ್ ರಕ್ತದಾನ ಶಿಬಿರ” ಉದ್ಘಾಟನೆಯನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶೇಖರ್ ಶೆಟ್ಟಿಗೌರವಾಧ್ಯಕ್ಷರು ಹಿಂದೂಯುವಸೇನೆ ಉಡುಪಿ, ಅಜಿತ್ ಕೊಡವೂರ್ ಜಿಲ್ಲಾಧ್ಯಕ್ಷರು ಹಿಂದೂಯುವಸೇನೆ ಉಡುಪಿ, ಡಾ ವೀಣಾ ಕುಮಾರಿ ರಕ್ತನಿಧಿ ವಿಭಾಗ ಜಿಲ್ಲಾಸ್ಪತ್ರೆ ಉಡುಪಿ, ಸುನಿಲ್ ನೇಜಾರ್ ನಗರ ಅಧ್ಯಕ್ಷರು ಹಿಂದೂಯುವ ಸೇನೆ ಉಡುಪಿ ಸನತ್ ಸಾಲ್ಯಾನ್ ಸಲಹಾ ಸಮಿತಿ ಹಿಂದೂ ಯುವಸೇನೆ ಜಿಲ್ಲಾ ಘಟಕ ಉಡುಪಿ, ಅರುಣ್ ಕುಂದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿಂದೂ ಯುವಸೇನೆ ಉಡುಪಿ, ಅಶೋಕ್ ಶೆಟ್ಟಿ ಅಧ್ಯಕ್ಷರು ಹಿಂದೂ ಯುವಸೇನೆ ಹಿರಿಯಡ್ಕ ಶಾಖೆ, ಅಮರನಾಥ್ ಶೆಟ್ಟಿ ಉದ್ಯಮಿಗಳು ಹಿರಿಯಡ್ಕ ಉಪಸ್ಥಿತರಿದ್ದರು.