ಕುಂದಾಪುರ: ಬೇಳೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಎಂಬುವರನ್ನು ಉಡುಪಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ ಅವರು ವ್ಯಕ್ತಿಯೊಬ್ಬರಿಂದ 10,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ
ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಒಟ್ಟು ನಾಲ್ಕು ಕಂತಿನಲ್ಲಿ 1.20ಲಕ್ಷ ರೂ. ಹಣ ಬಿಡುಗಡೆಯಾಗಿದ್ದು, ಈ ಹಣದಲ್ಲಿ ಅರ್ಧಂಶ ಹಣ ಮಂಜೂರು ಮಾಡಿಸಲು ಪಿಡಿಓ 10ಸಾವಿರ ರೂ. ನೀಡುವಂತೆ ಲಂಚ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದು, ಅದರಂತೆ ಕಾರ್ಯಾ ಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಪಿಡಿಓ ಜಯಂತ್‌ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಮಂಗಳೂರು ಎಸ್ ಪಿ ಸೈಮನ್ ರವರ ನಿರ್ಧೇಶನದಲ್ಲಿ ಉಡುಪಿ ಡಿ ವೈ ಎಸ್ಪಿ ಪ್ರಕಾಶ್ ರವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ