ಬೈಂದೂರು : ಬೈಂದೂರು ಕ್ಷೇತ್ರದ ವಿದ್ಯಾವಂತರಿಗೆ ವಿದೇಶಿ ನೆಲದಲ್ಲಿ ಉದ್ಯೋಗ ನೀಡುವ ಗುರಿಯೊಂದಿಗೆ ಕೇಂದ್ರ ಸರಕಾರದ ಎನ್.ಎಸ್.ಡಿ ಸಿ ಯೋಜನೆಯಡಿಯಲ್ಲಿ ಅಜಿನೋರ್ ಪ್ರಾಯೋಜಕತ್ವದಲ್ಲಿ ದೇಶದಲ್ಲೇ ದ್ವಿತೀಯ ಭಾರಿಗೆ ಬೈಂದೂರಿನಲ್ಲಿ ಇಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ
ಸಮೃದ್ದ ಬೈಂದೂರಿನ ಪರಿಕಲ್ಪನೆಯಡಿಯಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ವಿದೇಶದಲ್ಲಿ ಉದ್ಯೋಗದ ಅವಕಾಶ ಒದಗಿಸುವ ಸಲುವಾಗಿ ಇಂದು ಶನಿವಾರ ಬೈಂದೂರಿನ ಜೆ.ಎನ್.ಆರ್. ಆಡಿಟೋರಿಯಂನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಈಗಾಗಲೇ ಸುಮಾರು 10 ಸಾವಿರ ಮಂದಿ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಾಸಕ ಗುರರಾಜ್ ಗಂಟಿಹೊಳೆ ತಿಳಿಸಿದ್ದಾರೆ
ಇಂದು ಬೆಳಿಗ್ಗೆ 9.00 ಗಂಟೆಗೆ ನಡೆಯುವ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭವನ್ನು ಸಂಸದ ಬಿ ವೈ ರಾಘವೇಂದ್ರ ಉದ್ಘಾಟಿಸಲಿದ್ದು ಶಾಸಕ ಗುರುರಾಜ್ ಗಂಟಿಹೊಳೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ.ಬೃಜೇಶ್ ಚೌಟ ಸಂಸದ ಶ್ರೀನಿವಾಸ ಪೂಜಾರಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಿ ಎಂ ಸಿಂಗ್ ಆಜಿ ಮ್ಯಾಥ್ಯೂ ಹಾಗೂ ಬೈಂದೂರು ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಭಾಗವಹಿಸಲಿದ್ದಾರೆ
ಇಂದಿನ ಅಂತಾರಾಷ್ಟ್ರೀಯ ಉದ್ಯೋಗ ಮೇಳದಲ್ಲಿ ಜಪಾನ್, ಮಲೇಶಿಯಾ, ಜರ್ಮನಿ, ಕ್ರೋವೇಶಿಯ, ಗಲ್ಫ್ ದೇಶಗಳ ಕಂಪೆನಿಗಳು ಭಾಗವಹಿಸಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ, ವಸತಿ ವ್ಯವಸ್ಥೆ ಊಟ ಉಪಾಹಾರ, ವೀಸಾ ಹಾಗೂ ಉಚಿತ ವಿಮಾನ ಟಿಕೆಟ್ ಕೇಂದ್ರ ಸರಕಾರದಿಂದ ದೊರೆಯಲಿದೆ ಎಂದು ಬೈಂದೂರು ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ

