Home » ಬಿಪಿಎಲ್ ಕಾರ್ಡ್ ರದ್ದು : ಗಂಟಿಹೊಳೆ ಆಕ್ರೋಶ
 

ಬಿಪಿಎಲ್ ಕಾರ್ಡ್ ರದ್ದು : ಗಂಟಿಹೊಳೆ ಆಕ್ರೋಶ

by Kundapur Xpress
Spread the love

ಬೈಂದೂರು : ರಾಜ್ಯದ ಕಾಂಗ್ರೆಸ್ ಸರಕಾರ ಬಿಪಿಎಲ್  ಕಾರ್ಡ್ ರದ್ದು ಪಡಿಸಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಡಿತರ ವಿತರಣೆ ಮತ್ತು ಬಿಪಿಎಲ್ ರೇಷನ್ ಕಾರ್ಡ್ ರದ್ದು ಪಡಿಸಿ ಬಡವರ ತುತ್ತು ಅನ್ನಕ್ಕೂ ಕಲ್ಲು ಹಾಕಿದ್ದಲ್ಲದೆ, ಕೇಂದ್ರ ಸರ್ಕಾರದಿಂದ ಬಡವರಿಗೆ ಸಿಗುತ್ತಿರುವ ಆಯುಷ್ಮಾನ್ ಯೋಜನೆ ಮತ್ತು ಇನ್ನಿತರ ಸೌಲಭ್ಯಗಳ ಅವಕಾಶವನ್ನೂ ಕೂಡ ಕಿತ್ತುಕೊಳ್ಳಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಸಮಸ್ಯೆಗಳನ್ನು ಬಗೆಹರಿಸಿ ಮೊದಲಿನಂತೆ ಪಡಿತರ ಮತ್ತು ಪಡಿತರ ಚೀಟಿ ಬಡವರಿಗೆ ವಿತರಿಸಬೇಕು. ಜನರೊಂದಿಗೆ ಬೀದಿಗಿಳಿದು ಹೋರಾಟ ನಡೆಸುವ ಹಂತಕ್ಕೆ ಹೋಗುವ ಮುನ್ನ ಬಡವರಿಗಾಗುತ್ತಿರುವ ಅನ್ಯಾಯವನ್ನು ಈ ಕೂಡಲೇ ಸರಿಪಡಿಸಬೇಕೆಂದು ಶಾಸಕ ಗುರುರಾಜ್ ಗಂಟಿಹೊಳೆ ಸರಕಾರವನ್ನು ಆಗ್ರಹಿಸಿದ್ದಾರೆ.

   

Related Articles

error: Content is protected !!