Home » ವೈಶ್ಯವಾಣಿ ಸಮುದಾಯವನ್ನು ಹಿಂದುಳಿದ ವರ್ಗದಡಿ ಸೇರಿಸಿ
 

ವೈಶ್ಯವಾಣಿ ಸಮುದಾಯವನ್ನು ಹಿಂದುಳಿದ ವರ್ಗದಡಿ ಸೇರಿಸಿ

ಶಾಸಕ ಗಂಟಿ ಹೊಳೆ ಪ್ರಸ್ತಾಪ

by Kundapur Xpress
Spread the love

ಬೈಂದೂರು : ರಾಜ್ಯ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇರುವ ವೈಶ್ಯವಾಣಿ ಸಮುದಾಯದವರು ತೀರಾ ಹಿಂದುಳಿದವರಾಗಿದ್ದರೂ ಹಿಂದುಳಿದ ವರ್ಗಗಳ ಪ್ರವರ್ಗ ಗಳಡಿ ಯಾವುದೇ ಸೌಲಭ್ಯ ದೊರಕದೇ ಇರುವುದು ಹಾಗೂ ಈ ಸಮುದಾಯದ ಕೋರಿಕೆಯಂತೆ ಹಿಂದುಳಿದ ವರ್ಗಗಳ ಪ್ರವರ್ಗಗಳಡಿ ಸೇರಿಸಿ ಸೌಲಭ್ಯ ಒದಗಿಸಲು ಶಾಸಕ ಗುರುರಾಜ್ ಶೆಟ್ಟಿ ಗಂಟಿ ಹೊಳೆಯವರು ವಿಧಾನ ಮಂಡಲ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದರು.

ಭೆಯಲ್ಲಿ ಕೇಳಿದ ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶಿವರಾಜ್ ತಂಗಡಗಿಯವರು 2002ರ ಸರಕಾರದ ಆದೇಶದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ವೈಶ್ಯವಾಣಿ ಸಮುದಾಯವು ಸೇರಿರುವುದಿಲ್ಲ. ಶ್ರೀ ಕೆ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ಸರ್ಕಾರಕ್ಕೆ ಸಲ್ಲಿಸಿದ ಮಧ್ಯಂತರ ವರದಿ ಅನುಸಾರ ವೈಶ್ಯವಾಣಿ ಸಮುದಾಯವನ್ನು ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಸರ್ಕಾರದ ಆದೇಶ ಸಂಖ್ಯೆ : ಹಿಂವಕ 134 ಬಿಸಿಎ 2023 ದಿನಾಂಕ : 27.03.2023 ಅತೀ ಹಿಂದುಳಿದ ಪ್ರವರ್ಗ -11(ಡಿ )ರಲ್ಲಿ ಹೊಸದಾಗಿ ಸೇರ್ಪಡೆಗೊಳಿಸಿ ಆದೇಶಿಸಲಾಗಿರುತ್ತದೆ. ಮುಂದುವರೆದು ಸರ್ಕಾರದ ಆದೇಶ ಸಂಖ್ಯೆ : ಹಿಂವಕ 134 ಬಿಸಿಎ 2023 ದಿನಾಂಕ : 27.03.2023 ಹಾಗೂ ಆದೇಶ ಸಂಖ್ಯೆ : ಹಿಂವಕ 135 ಬಿಸಿಎ 2023, ದಿನಾಂಕ : 27.03.2023 ರ ಆದೇಶವನ್ನು ಪ್ರಶ್ನಿಸಿ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಕೆ ಆಗಿರುವುದರಿಂದ ಸದ್ರಿ ವಿಚಾರವು ನ್ಯಾಯದಲ್ಲಿ ಬಾಕಿ ಇರುವುದಾಗಿದೆ. ಮುಂದುವರಿದು ಶ್ರೀ ಸಿ. ಎಸ್ ದ್ವಾರಕನಾಥ್ ನೇತೃತ್ವದ ಆಯೋಗ ಸಲ್ಲಿಸಿರುವ ವಿಶೇಷ ವರದಿ 2, 2010 ಹಾಗೂ ಸಿಎನ್ ಶಂಕರಪ್ಪ ನೇತೃತ್ವದ ಆಯೋಗ 2013ರಲ್ಲಿ ಸಲ್ಲಿಸಿರುವ ದ್ವಿತೀಯ ವರದಿಯಲ್ಲಿ ವೈಶ್ಯವಾಣಿ ಸಮುದಾಯವನ್ನು ಪ್ರವರ್ಗ 3 ಬಿ ಅಡಿಯಲ್ಲಿ ಸೇರಿಸಬೇಕೆಂದು ಸರಕಾರಕ್ಕೆ ಸಲಹೆ ನೀಡಿರುತ್ತದೆ. ಎಂದು ಶಾಸಕರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ

 

Related Articles

error: Content is protected !!