Home » ಹೆಬ್ಬಾರತಡಿ-ಬಾಲೋಡಿ ಸಂಪರ್ಕಿಸುವ ಅರುಣಾಚಲಮ್‌ ಕಾಲುಸಂಕ ಲೋಕಾರ್ಪಣೆ
 

ಹೆಬ್ಬಾರತಡಿ-ಬಾಲೋಡಿ ಸಂಪರ್ಕಿಸುವ ಅರುಣಾಚಲಮ್‌ ಕಾಲುಸಂಕ ಲೋಕಾರ್ಪಣೆ

by Kundapur Xpress
Spread the love

ಬೈಂದೂರು  : ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಇಂಡಸ್ ಟಿಎಂಟಿ ಇಂಡಸ್ಟ್ರೀಸ್‌ ಇದರ ಸಿಎಸ್‌ಆರ್‌ ನಿಧಿ ಮೂಲಕ ಸಮ್ಯತ ಫೌಂಡೇಶನ್‌ ಸಹಭಾಗಿತ್ವದಲ್ಲಿ ಆಜ್ರಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಹೆಬ್ಬಾರತಡಿ -ಬಾಲೋಡಿ ಸಂಪರ್ಕಿಸುವ ಅರುಣಾಚಲಮ್‌ ಕಾಲುಸಂಕವನ್ನು ಉದ್ಘಾಟಿಸಿದರು.

ಕಾಲುಸಂಕ ಉದ್ಘಾಟಿಸಿ ಮಾತನಾಡಿದ ಶಾಸಕರು, ಹೆಬ್ಬಾರತಡಿ -ಬಾಲೋಡಿ ಭಾಗದ ಬಹುದೊಡ್ಡ ಕೊರೆತ ಎಂಬಂತಿದ್ದ ಸಂಪರ್ಕ ಸೇತುವೆಯನ್ನು ದಾನಿಗಳ ಸಹಕಾರದೊಂದಿಗೆ ನೀಗಿಸಿದ್ದೇವೆ. ಎಲ್ಲವನ್ನೂ ಸರ್ಕಾರದ ಕಡೆಗೆ ಬೊಟ್ಟು ಮಾಡುವ ಬದಲು, ನಮ್ಮ ಇಚ್ಛಾಶಕ್ತಿ ಬಳಸಿ ಕಾರ್ಯೋನ್ಮುಖರಾದರೆ ಹೇಗೆ ಜನರ ಸಮಸ್ಯೆಗಳನ್ನು ನಿವಾರಿಸಬಹುದು ಎನ್ನುವುದಕ್ಕೆ ಅರುಣಾಚಲಂ ಕಾಲುಸಂಕಗಳೇ ದಂತಕತೆಗಳಾಗಿ ಸಮಾಜದ ಮುಂದೆ ನಿಲ್ಲುತ್ತದೆ ಎಂದರು.

 

Related Articles

error: Content is protected !!