ಕುಂದಾಪುರ : ಗೃಹಸಚಿವ ಡಾ. ಜಿ.ಪರಮೇಶ್ವರ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ಮಾಡಿ ದೇವಿ ದರ್ಶನ ಪಡೆದು, ತುಪ್ಪದ ದೀಪದ ಸೇವೆ ಸಲ್ಲಿಸಿದರು.
ದೇವಳದ ಹಿರಿಯ ಅರ್ಚಕರಾದ ಎನ್. ನರಸಿಂಹ ಅಡಿಗರ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ವತಿಯಿಂದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತೆಗ್ಗರ್ಸೆ ಗೃಹಮಂತ್ರಿಯವರನ್ನು ದೇವಳದ ಕಚೇರಿಯಲ್ಲಿ ಸನ್ಮಾನಿಸಿದರು. ಸದಸ್ಯರಾದ ಡಾ. ಅಭಿಲಾಷ್ ಪಿ.ವಿ., ರಘುರಾಮ ದೇವಾಡಿಗ ಆಲೂರು, ಸುರೇಂದ್ರ ಶೆಟ್ಟಿ, ಮಹಾಲಿಂಗ ನಾಯ್ಕ, ಧನಾಕ್ಷಿ ವಿಶ್ವನಾಥ ಪೂಜಾರಿ, ಕೆ. ಸುಧಾ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಶುಕ್ರವಾರ ರಾತ್ರಿ ಕೊಲ್ಲೂರಿಗೆ ಆಗಮಿಸಿ ತಂಗಿದ್ದ ಗೃಹಸಚಿವರು, ಮುಂಜಾನೆ ಪೂಜೆ ದೇವಳಕ್ಕೆ ಆಗಮಿಸಿದರು. ಇವರ ಜೊತೆ ಮೀನುಗಾರಿಕಾ ಇಲಾಖೆ ಸಚಿವ ಮಾಂಕಾಳ್ ವೈದ್ಯ ಮಾಜಿ ಶಾಸಕ ಗೋಪಾಲ್ ಪೂಜಾರಿ ಎಸ್ ರಾಜು ಪೂಜಾರಿ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು

