ಮಂಗಳೂರು : ಸುರತ್ಕಲ್‌ನ ರಾಷ್ಟ್ರ ಭಕ್ತ ನಾಗರಿಕ ವೇದಿಕೆ ವತಿಯಿಂದ ಇಂದು ಜುಲೈ 21ರಂದು ಬೆಳಗ್ಗೆ ಸುರತ್ಕಲ್ ಕರ್ನಾಟಕ ಸೇವಾ ವೃಂದ ವೇದಿಕೆ ಬಳಿಯಿಂದ ಮಂಗಳೂರು ಕದ್ರಿ ಯುದ್ಧ ಸ್ಮಾರಕ ತನಕ ‘ಅಮರ್ ಜವಾನ್ ಜ್ಯೋತಿ’ ಹುತಾತ್ಮ ಕ್ಯಾ.ಎಂ.ವಿ. ಪ್ರಾಂಜಲ್ ಶೌರ್ಯಚಕ್ರ ಸ್ತಬ್ದ ಚಿತ್ರಗಳ ದ್ವಿಚಕ್ರ ವಾಹನ ಜಾಥಾ ಹಾಗೂ ಜು.26ರಂದು ಸುರತ್ತಲ್ ಜಂಕ್ಷನ್‌ನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ, ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆ ನಡೆಯಲಿದೆ

ಕಾರ್ಗಿಲ್ ವಿಜಯ ದಿವಸ್‌ನ 25ನೇ ವರ್ಷಾಚರಣೆ ಅಂಗವಾಗಿ ಜು.21 ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಸೇವಾ ವೃಂದ ವೇದಿಕೆ ಬಳಿಯಿಂದ ಆರಂಭಗೊಳ್ಳುವ ದ್ವಿಚಕ್ರ ವಾಹನ ಜಾಥಾಕ್ಕೆ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಸುರತ್ಕಲ್ ಜಂಕ್ಷನ್, ಬೈಕಂಪಾಡಿ, ಎನ್‌ಎಂಪಿಎ, ಕೂಳೂರು, ಕೊಟ್ಟಾರ ಚೌಕಿ ಬಳಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ
ಎಂದು ರಾಷ್ಟ್ರ ಭಕ್ತ ನಾಗರಿಕ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹುತಾತ್ಮ ಕ್ಯಾ.ಎಂ.ವಿ. ಪ್ರಾಂಜಲ್ ಅವರ ತಂದೆ ಎಂ. ವೆಂಕಟೇಶ್ ಮತ್ತು ತಾಯಿ ಅನುರಾಧಾ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ

