ಕುಂದಾಪುರ : ಪಶುಪಾಲನ ಮತ್ತು ಪಶು ಸೇವಾ ವೈದ್ಯಕೀಯ ಇಲಾಖೆ ಕುಂದಾಪುರ, ಹಾಗೂ ಕಾಮಧೇನು ಗೋ ಸಂರಕ್ಷಣಾ ಟ್ರಸ್ಟ್ ಹೂವಿನಕೆರೆ ಅಸೋಡು ಇವರ ಸಂಯುಕ್ತ ಆಶ್ರಯದಲ್ಲಿ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ. ಕಿರಣ್ ಕುಮಾರ್ ಕೊಡ್ಗಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿ ಜಾನುವಾರುಗಳ ಕಾಲುಬಾಯಿ ಬೇನೆ ರೋಗ ವೈರಾಣುವಿನಿಂದ ಬರುವಂತಹ ಕಾಯಿಲೆಯಾಗಿದೆ.ಇದರಿಂದ ಜಾನುವಾರುಗಳಿಗೆ ಹೆಚ್ಚಿನ ಜ್ವರ ಕಾಣಿಸಿಕೊಂಡು ಕಾಲು ಮತ್ತು ಬಾಯಿಯಲ್ಲಿ ಹುಣ್ಣಾಗಿ ಜೊಲ್ಲು ಸುರಿಸುತ್ತವೆ.ಜಾನುವಾರುಗಳಲ್ಲಿ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಎಂದು ತಿಳಿಸಿದರು.
ರೋಗ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ತಮ್ಮ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿಸುವಂತೆ.ಅವರು ಮನವಿ ಮಾಡಿದರು ಈ ಸಂದರ್ಭದಲ್ಲಿ ಅಸೋಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುನಾಥ್, ಉಪಾಧ್ಯಕ್ಷೆ ಪಾರ್ವತಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ರವಿರಾಜ್ ಶೆಟ್ಟಿ,, ಪಂಚಾಯತ್ ಸದಸ್ಯರಾದ ಚಂದ್ರ ಪೂಜಾರಿ,*, ಕುಂದಾಪುರ ವಲಯ ವೈದ್ಯಾಧಿಕಾರಿಯಾದ *ಬಾಬಣ್ಣ ಪೂಜಾರಿ ಹಾಗೂ ಅರುಣ್ ಕೆ.ಬಿ,, ಜಯಣ್ಣ .ಉಪಸಿತರಿದ್ದರು.