Home » ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆ
 

ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆ

chaithra cheating case

by Kundapur Xpress
Spread the love

ಕುಂದಾಪುರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯಿಂದ  ಹಣ ಪಡೆದ ಆರೋಪಿ ಚೈತ್ರಾ ಕುಂದಾಪುರ ಇಂದು ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾಳೆ

ಪ್ರಕರಣಕ್ಕೆ ಸಂಭಂಧಿಸಿದಂತೆ ಸಿ ಸಿ ಬಿ ಪೊಲೀಸರು ಪ್ರಶ್ನೆ ಕೇಳುವ ವೇಳೆ ಹಠಾತ್‌ ಕುಸಿದು ಬಿದ್ದು ಬಾಯಲ್ಲಿ ನೋರೆ ಬಂದಿತ್ತು ಇದೀಗ ಚೈತ್ರಾ ಕುಂದಾಪುರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ

ಆಸ್ಪತ್ರೆ ಮೂಲಗಳ ಪ್ರಕಾರ ಚೈತ್ರಾಗೆ ಯಾವುದೇ ರೀತಿಯ ಕಾಯಿಲೆಗಳಿಲ್ಲ ಈಗ ಅವಳು ಸಹಜ ಸ್ಥಿತಿಯಲ್ಲಿದ್ದಾಳೆ ಎಂದು ತಿಳಿಸಿದ್ದಾರೆ

ಸಿ ಸಿ ಬಿ ಪೊಲೀಸ್‌ ಮೂಲಗಳ ಪ್ರಕಾರ ಚೈತ್ರಾ ಬಹು ದೊಡ್ಡ ನಾಟಕ ಮಾಡಿದ್ದು ಯಾವುದೇ ರೀತಿಯ ಅನಾರೋಗ್ಯವಿಲ್ಲ ಎಂದು ತಿಳಿಸಿದ್ದಾರೆ ಸಿ ಸಿ ಬಿ ಪೊಲೀಸರು ಈಗಾಗಲೇ 2 ಕೋಟಿಗೂ ಮಿಕ್ಕಿ ಚಿನ್ನಾಭರಣ ನಗದು ಹಾಗೂ ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ 

   

Related Articles

error: Content is protected !!