ಕುಂದಾಪುರ: ಯುವಬ್ರಿಗೇಡ್ ವತಿಯಿಂದ ಕುಂದಾಪುರದಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣಕ್ಕೆ ಅವಕಾಶ ನೀಡದಂತೆ ಕುಂದಾಪುರ ಯುವ ಕಾಂಗ್ರೆಸ್ ಹಾಗೂ ಎನ್ ಎಸ್ ಯು ಐ ಘಟಕದ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ
ಯುವಬ್ರಿಗೇಡ್” ಎಂಬ ಸಂಸ್ಥೆಯ ವತಿಯಿಂದ ಇದೇ ತಿಂಗಳ (ಜೂನ್) 20, 21 ಮತ್ತು 22 ಒಟ್ಟು ಮೂರು ದಿನಗಳ ಕಾಲ “ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ” ಎಂಬ ವಿಚಾರದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಕುಂದಾಪುರದ ಚಿಕ್ಕನ್‌ಸಾಲ್ ರಸ್ತೆಯ ಮೊಗವೀರ ಭವನದಲ್ಲಿ ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಲಿದ್ದಾರೆ
ಕುಂದಾಪುರವು ಸೌಹಾರ್ಧತೆಗೆ ಹೆಸರಾದ ತಾಲೂಕಾಗಿದ್ದು, ಇಲ್ಲಿ ಬಹುಪಾಲು ಶಾಂತಿ ನೆಲೆಸಿದೆ. ಆದ ಕಾರಣ ಈ ಚಕ್ರವರ್ತಿ ಸೂಲಿಬೆಲೆಗೆ ಭಾಷಣ ನಡೆಸಲು ಅವಕಾಶ ಕೊಟ್ಟಲ್ಲಿ ಇಲ್ಲಿನ ಶಾಂತಿ ಸೌಹಾರ್ಧತೆ ಕೆಡುವ ಅಪಾಯ ಇದ್ದು ಅಗತ್ಯವಾಗಿ ಯಾವುದೇ ಕಾರಣಕ್ಕೂ ಅವರಿಗೆ ಕುಂದಾಪುರ ತಾಲ್ಲೂಕಿನಲ್ಲಿ ಎಲ್ಲಿಯೂ ಕೂಡ ಭಾಷಣಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷವೂ ಕೂಡ ಕುಂದಾಪುರದ ಮೊಗವೀರ ಭವನದಲ್ಲಿ ಚಕ್ರವರ್ತಿ ಸೂಲಿಬೆಲೆಯವರ 3 ದಿನಗಳ ಸರಣಿ ಉಪನ್ಯಾಸ ಕಾರ್ಯಕ್ರವು ಜರುಗಿದ್ದು ಮೊಗವೀರ ಭವನದಲ್ಲಿ ಭಾಷಣ ಕೇಳಲು ಜನರು ಮುಗಿಬಿದ್ದಿದ್ದರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೇ ಶಾಂತ ರೀತಿಯಲ್ಲಿ ಕಾರ್ಯಕ್ರಮ ಜರುಗಿದ್ದನ್ನು ಇಲ್ಲಿ ಸ್ಮರಿಸಬಹುದು

