Home » ಚೇತನಾ ಪ್ರೌಢಶಾಲೆ : ಸ್ವಾತಂತ್ರ್ಯೋತ್ಸವ
 

ಚೇತನಾ ಪ್ರೌಢಶಾಲೆ : ಸ್ವಾತಂತ್ರ್ಯೋತ್ಸವ

by Kundapur Xpress
Spread the love

ಕೋಟ : ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆ ಮತ್ತು ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಮಾಬುಕಳ ಇಲ್ಲಿ 79 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.

ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಭರತ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಎಚ್. ಇಬ್ರಾಹಿಂ ಸಾಹೇಬ್, , ಫಾರ್ಚುನ್ ಅಕಾಡೆಮಿಕ್ ಅಂಡ್ ಚಾರಿಟೇಬಲ್ ಟ್ರಸ್ಟ್ನ ಚೇರ್ಮನ್ ತಾರನಾಥ ಶೆಟ್ಟಿ, ಟ್ರಸ್ಟಿ ಸುಜಾತಾ ತಾರನಾಥ ಶೆಟ್ಟಿ, ವಿಶ್ರಾಂತ ಮುಖ್ಯೋಪಾಧ್ಯಯ ಗಣೇಶ್ ಜಿ ,ಪ್ರಾಂಶುಪಾಲೆ ಸ್ಮಿತಾ ಮೋಲ್, ರೋಟರಿ ಸದಸ್ಯರು, ಚೇತನಾ ಪ್ರೌಢಶಾಲೆ ಹಾಗೂ ಫಾರ್ಚುನ್ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಹರ್ಷವರ್ಧನ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು

 

Related Articles

error: Content is protected !!