173
ಕೋಟ : ಪಾಂಚಜನ್ಯ ಸಂಘ ಅಂಬಾಗಿಲುಕೆರೆ ರಸ್ತೆ ಪಾರಂಪಳ್ಳಿ- ಹಂದಟ್ಟು ಮತ್ತು ರೋಟರಿಕ್ಲಬ್ ಕೋಟ ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಅಂಬಾಗಿಲಕೆರೆ ರಸ್ತೆ , ಚಿತ್ರಪಾಡಿ ಶಾಲಾ ವಠಾರ ಮತ್ತು ಪಾರಂಪಳ್ಳಿ ಗ್ರಾಮದ ರಸ್ತೆಯ ಇಕ್ಕೆಲೆಗಳಲ್ಲಿ ಬೆಳೆದು ನಿಂತ ಕಳೆ ಗಿಡಗಳನ್ನು ಕತ್ತರಿಸಿ ಪರಿಸರವನ್ನು ಸ್ವಚ್ಛ ಗೊಳಿಸಲಾಯಿತು.
ಪಾಂಚಜನ್ಯ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ ,ರೋಟರಿ ಕ್ಲಬ್ ಅಧ್ಯಕ್ಷ ಯೋಗೀಶ್, ಚಿತ್ರಪಾಡಿ ಶಾಲಾ ಶಿಕ್ಷಕ ಪ್ರಶಾಂತ ಶೆಟ್ಟಿ, ಅಕ್ಷರ ರಥದ ಅಧ್ಯಕ್ಷ ನಾಗರಾಜ ಗಾಣಿಗ, ಜಗದೀಶ ಉಪಾಧ್ಯಯ,ಕ್ಲಬ್‌ನ ಮಾಜಿ ಅಧ್ಯಕ್ಷ ಆರುಣ ಕುಂದರ್ , ಮಾಧವ ಪೂಜಾರಿ, ಗೋಪಾಲ ಜಿ. ಕರುಣ ಕುಂದರ್, ಪಾಂಚಜನ್ಯದ ಗಿರಿಯ ಪೂಜಾರಿ , ರವಿ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು. ಪಾಂಚಜನ್ಯದ ಪ್ರಧಾನ ಕಾರ್ಯದರ್ಶಿ ಕೃಷ್ಣ ಆಚಾರ್ಯ ಸ್ವಾಗತಿಸಿ ರೋಟರಿ ಕಾರ್ಯದರ್ಶಿ ಶರಣಯ್ಯ ಹೀರೆಮಠ ವಂದಿಸಿದರು.ಸಾಲಿಗ್ರಾಮ ಪಟ್ಟಣಪಂಚಾಯತ್ ಸಹಕಾರ ನೀಡಿತು.

