Home » ಕಾಂಗ್ರೆಸ್ ಮೌನ ಪ್ರತಿಭಟನೆ
 

ಕಾಂಗ್ರೆಸ್ ಮೌನ ಪ್ರತಿಭಟನೆ

by Kundapur Xpress
Spread the love

ಕುಂದಾಪುರ: ಎಐಸಿಸಿ ಮುಖಂಡ ರಾಹುಲ್ ಗಾಂಧಿ ವಿರುದ್ದ ಕೇಂದ್ರ ಸರಕಾರ ನಡೆಸುತ್ತಿರುವ ಹುನ್ನಾರ ಮತ್ತು ರಾಹುಲ್ ಗಾಂಧಿಯವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ಅನರ್ಹತೆಗೊಳಿಸಿರುವುದನ್ನು ಖಂಡಿಸಿ ಕುಂದಾಪುರ ಬ್ಲಾಕ್‌ ಕಾಂಗ್ರೇಸ್‌  ನೇತೃತ್ವದಲ್ಲಿ ಪಕ್ಷದ ಪ್ರಮುಖರು ಬುಧವಾರ ನಗರದ ಶಾಸ್ತ್ರೀ ಸರ್ಕಲ್‌ ನಲ್ಲಿ ಮೌನ ಪ್ರತಿಭಟನೆ ನಡೆಸಿದರು

ಈ ಸಂದರ್ಭದಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೇಸ್‌ ಮುಖಂಡರಾದ ಮೊಳಹಳ್ಳಿ ದಿನೇಶ್‌ ಹೆಗ್ಡೆಯವರು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡು ರಾಹುಲ್ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚುತ್ತಿರುವ ಸಂದರ್ಭದಲ್ಲಿ  ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಭಾರತ್ ಜೋಡೋ ಯಾತ್ರೆಗೆ ಕಾಶ್ಮೀರದಿಂದ-ಕನ್ಯಾಕುಮಾರಿಯ ತನಕ ರಾಹುಲ್ ಅವರಿಗೆ ಸಿಕ್ಕಿದ ಅಭೂತಪೂರ್ವ ಜನಬೆಂಬಲ ಮುಂದೊಂದು ದಿನ ಕಾಂಗ್ರೆಸ್ ಈ ದೇಶದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂದೇಹವೇ ಇಲ್ಲ ಎನ್ನುವ ವಾತವರಣವನ್ನು ಮನಗಂಡು ಅವರನ್ನು ಕುಗ್ಗಿಸಲು ಈ ರೀತಿಯ ಧಮನಕಾರಿ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರೊಂದಿಗೆ ನಾವೆಲ್ಲರೂ ಜೊತೆಯಾಗಿ ನಿಲ್ಲುತ್ತೇವೆ ಎಂದು ನುಡಿದರು

ಕಾಂಗ್ರೇಸ್‌ ನ ಮೌನ ಪ್ರತಿಭಟನೆಯಲ್ಲಿ  ಮಾಜಿ ಸಭಾಪತಿ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ ದಿನೇಶ್ ಹೆಗ್ಡೆ ಮೊಳಹಳ್ಳಿ ಹರಿಪ್ರಸಾದ್ ಶೆಟ್ಟಿ ( ಬ್ಲಾಕ್ ಅಧ್ಯಕ್ಷರು) ಶಿವರಾಮ ಶೆಟ್ಟಿ ( ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷ) ಬಿ. ಹೆರಿಯಣ್ಣ, ಕೇದೂರು ಸದಾನಂದ ಶೆಟ್ಟಿ, ಅಶೋಕ್ ಪೂಜಾರಿ  , ದೇವಾನಂದ ಶೆಟ್ಟಿ, ವಿಕಾಸ್ ಹೆಗ್ಡೆ ( ಜಿಲ್ಲಾ ವಕ್ತಾರರು), ಇಚ್ಚಿತಾರ್ಥ ಶೆಟ್ಟಿ ( ಯುವ ಕಾಂಗ್ರೆಸ್ ಅಧ್ಯಕ್ಷ) ವಿನೋದ್ ಕ್ರಾಸ್ತಾ ( ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ), ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಚಂದ್ರ ಶೇಖರ್ ಖಾರ್ವಿ, ಅಶ್ಬಕ್, ಶ್ರೀಧರ್ ಶೇರೆಗಾರ್, ಅಬ್ಬು, ಎನ್ ಎಸ್ ಯು ಐ ನಾ ಸುಜನ್ ಶೆಟ್ಟಿ, ಗಣೇಶ್ ಶೇರೆಗಾರ್, ಜ್ಯೋತಿ ಪುತ್ರನ್, ರೇವತಿ ಶೆಟ್ಟಿ, ಚಂದ್ರ ಶೇಖರ್ ಶೆಟ್ಟಿ, ಗಂಗಾಧರ್ ಶೆಟ್ಟಿ, ಜಾನಕಿ ಬಿಲ್ಲವ, ಅಭಿಜಿತ್ ಪೂಜಾರಿ, ಆಶಾ ಕರ್ವಾಲ್ಲೊ, ಶೋಭಾ ಸಚ್ಚಿದಾನಂದ, ಜ್ಯೋತಿ ನಾಯ್ಕ್, ರಮೇಶ್ ಶೆಟ್ಟಿ, ರಾಕೇಶ್ ಶೆಟ್ಟಿ, ಮೇಬಲ್ ಡಿಸೋಜ, ಕೇಶವ್ ಭಟ್, ಅಶೋಕ್ ಸುವರ್ಣ, ದಿವಾಕರ್ ಶೆಟ್ಟಿ ಕೋಣಿ  ಕಾಂಗ್ರೇಸನ ಹಿರಿಯ ಮುಖಂಡರಾದ ಶಿವರಾಮ್‌ ಪುತ್ರನ್‌ ರವರು ಭಾಗವಹಿಸಿದರು

   

Related Articles

error: Content is protected !!