Home » ಕಾಮಗಾರಿ ವೇಳೆ ತುಂಡಾದ ಕ್ರೈನ್
 

ಕಾಮಗಾರಿ ವೇಳೆ ತುಂಡಾದ ಕ್ರೈನ್

by Kundapur Xpress
Spread the love

ಉಡುಪಿ : ಇಂದ್ರಾಳಿ ರೈಲ್ವೇ ಮೇಲ್ಲೇತುವೆ ಕಾಮಗಾರಿ ವೇಳೆ ಗರ್ಡರ್ ಎಳೆಯುತ್ತಿದ್ದ ಕೇನ್ ಮಗುಚಿ ಬಿದ್ದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಸ್ಟೀಲ್‌ ಬ್ರಿಡ್ಜ್ ನಿರ್ಮಾಣ ಸಂಬಂಧ ಗರ್ಡ‌್ರಗಳನ್ನು `ಜೋಡಿಸುವ ಹಾಗೂ ವೆಲ್ಡಿಂಗ್ ಕಾರ್ಯ ಹಗಲಿರುಳು ನಡೆಯುತ್ತಿದೆ. ಟನ್ ಗಟ್ಟಲೆ ಭಾರ ಇರುವ ಗರ್ಡರ್ ಗಳನ್ನು ಎತ್ತಲು ಎರಡು ಕ್ರೇನ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗುರುವಾರ ರಾತ್ರಿ ಗರ್ಡರ್ ಎತ್ತುವ ಸಂದರ್ಭದಲ್ಲಿ ಒಂದು ಕ್ರೇನ್ ಭಾರ ತಡೆಯಲಾಗದೆ ರೋಪ್ ತುಂಡಾಗಿ ರಸ್ತೆ ಮಧ್ಯ ದಲ್ಲಿಯೇ ಮಗುಚಿ ಬಿದ್ದಿದೆ. ಈ ವೇಳೆ ಕಾರ್ಮಿಕರು ಯಾರೂ ಸಮೀಪ ಇಲ್ಲದೇ ಇದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. 

   

Related Articles

error: Content is protected !!