80
ಬೈಂದೂರು: ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಸಾಯಿ ಖುಷಿ ರೆಸಾರ್ಟ ಬಳಿ ರಸ್ತೆಯಲ್ಲಿ ಸೌಪರ್ಣಿಕಾ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಅನುಮಾನ ಬಂದು ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್ ರಾತ್ರಿಯ ವೇಳೆ ಮರಳು ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ
ಅಕ್ರಮವಾಗಿ ಮರಳು ಸಾಕಾಟ ಮಾಡುತ್ತಿದ್ದ ಪಿಕಪ್ ಬುಲೆರೋ ವಾಹನವನ್ನು ಸಿಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಅಕ್ರಮ ಮರಳು ಅಡ್ಡೆ ದಾಳಿ ಸಂದರ್ಭ ತಪ್ಪಿಸಿಕೊಂಡ ಆರೋಪಿಗಳಿಗಾಗಿ ಗಂಗೊಳ್ಳಿ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.

