ವಿಟ್ಲ : ಬಂಟ್ವಾಳ ವೀರಕಂಭ ಗ್ರಾಮದ ಪಾತ್ರತೋಟ ಎಂಬಲ್ಲಿ, ಅಕ್ರಮವಾಗಿ ಕೋಳಿ ಅಂಕದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಬಂದ ಮೇರೆಗೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಬಿ.ಎಸ್. ನಾಯಕ್ ರವರು ಸಿಬ್ಬಂದಿಗಳೊಂದಿಗೆ, ಕೋಳಿ ಅಂಕ ನಡೆಯುತ್ತಿದ್ದ. ಸ್ಥಳಕ್ಕೆ ತೆರಳಿದ್ದು ಈ ವೇಳೆ ಸಾರ್ವಜನಿಕ ಗುಡ್ಡೆಯ ಸ್ಥಳದಲ್ಲಿ ಕೆಲವರು ಗುಂಪು ಸೇರಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕದ ಜೂಜಾಟ ಆಡುತ್ತಿದ್ದುದು ಕಂಡು ಬಂದಿದೆ. ಅವರುಗಳ ಪೈಕಿ ಬಂಟ್ವಾಳ ತಾಲೂಕಿನ ಇಡಿದು ಗ್ರಾಮದ ನಿವಾಸಿ 38 ವರ್ಷ ಪ್ರಾಯದ ಉಮೇಶ, ಅನಂತಾಡಿ ಗ್ರಾಮದ ನಿವಾಸಿ 38 ವರ್ಷ ಪ್ರಾಯದ ಅಣು ಹಾಗೂ ವೀರಕಂಭ ಗ್ರಾಮದ ನಿವಾಸಿ 30 ವರ್ಷ ಪ್ರಾಯದ ಉಮೇಶ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನುಳಿದವರು ಪರಾರಿಯಾಗಿರುತ್ತಾರೆ.ಆರೋಪಿಗಳ ತಪಾಸಣೆಯ ವೇಳೆ ಜೂಜಾಟಕ್ಕೆ ಬಳಸಿದ್ದ ರೂಪಾಯಿ 2,100/-ನಗದು ಪತ್ತೆಯಾಗಿದ್ದು, ಸ್ಥಳದಲ್ಲಿ ಕೋಳಿ ಅಂಕಕ್ಕೆ ಬಳಸಿದ 5 ಕೋಳಿಗಳು, ಕೋಳಿ ಅಂಕಕ್ಕೆ ಬಳಸಿದ ಕತ್ತಿ ಹಾಗೂ ದಾರಗಳು ಪತ್ತೆಯಾಗಿರುತ್ತದೆ. ಸದ್ರಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

